ಕ್ರೈಂ ಸ್ಟೋರಿ

ಗೋಲ್ಡ್​ ಸ್ಮಗ್ಲಿಂಗ್ ಕೇಸ್; ಮೂರನೇ ಆರೋಪಿ ಸಾಹಿಲ್ ಜೈನ್ ಅರೆಸ್ಟ್​

ಬಳ್ಳಾರಿ: ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್ ಕೇಸ್​ಗೆ ಸಂಬಂಧಿಸಿದಂತೆ ಮೂರನೇ ಆರೋಪಿ ಅರೆಸ್ಟ್​ ಆಗಿದ್ದಾನೆ.

ಬಳ್ಳಾರಿ ಮೂಲದ ಸಾಹಿಲ್ ಜೈನ್ ಬಂಧಿತ ಆರೋಪಿ. ಸಾಹಿಲ್  ಚಿಕ್ಕ ವಯಸ್ಸಿನಿಂದ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಸಾಹಿಲ್ ಈ ಮೊದಲು ಇದೇ ರೀತಿಯ ಪ್ರಕರಣದಲ್ಲಿ ಮುಂಬೈನಲ್ಲಿ ಒಮ್ಮೆ ಬಂಧನವಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ

ಇನ್ನು ಸಾಹಿಲ್ ರನ್ಯಾ ರಾವ್ ಜೊತೆಗೆ ವಾಟ್ಸ್ಯಾಪ್ ಚಾಟಿಂಗ್ ಮಾಡಿದ್ದ ಹಿನ್ನಲೆ ಸಾಹಿಲ್ ಅರೆಸ್ಟ್ ಆಗಿದ್ದಾನೆ. ಸದ್ಯ ಸಾಹಿಲ್​ನನ್ನು ವಶಕ್ಕೆ ಪಡೆದಿರುವ DRI ಅಧಿಕಾರಿಗಳು ಸಾಹಿಲ್ ತಂದೆ ಮಹೇಂದ್ರ ಜೈನ್​ಗೂ ನೋಟಿಸ್​ ಕೊಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button