ಕ್ರೈಂ ಸ್ಟೋರಿ

ಚಿನ್ನ ಕಳ್ಳಸಾಗಾಣೆ ಕೇಸ್​; ರನ್ಯಾ ರಾವ್ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು:  ಚಿನ್ನ ಕಳ್ಳಸಾಗಾಣೆ ಕೇಸ್​ನಲ್ಲಿ ಸದ್ಯ ಜೈಲಿನಲ್ಲಿರುವ ನಟಿ ರನ್ಯಾ ರಾವ್, ಮತ್ತಿಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ನಗರದ ನ್ಯಾಯಾಲಯ ಏ.21ರ ವರೆಗೆ ವಿಸ್ತರಿಸಿದೆ.

ರನ್ಯಾ ರಾವ್, ಉದ್ಯಮಿ ತರುಣ್ ರಾಜು ಮತ್ತು ಜ್ಯುವೆಲರಿ ವ್ಯಾಪಾರಿ ಸಾಹಿಲ್ ಜೈನ್ ಅವರು ದುಬೈನಿಂದ ಭಾರತಕ್ಕೆ 12.56ಕೋಟಿ ರೂ.ಗು ಹೆಚ್ಚು ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪ ಹೊತ್ತಿದ್ದಾರೆ.

ಮಾರ್ಚ್​ 3, 2025ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ 14.8 ಕೆಜಿ ಚಿನ್ನ ಕಳ್ಳಸಾಗಾಣೆ ಆರೋಪದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ ನಂತರ ಈ ಕೇಸ್​ ಬೆಳಕಿಗೆ ಬಂದಿತ್ತು.

Comments (0)

Your email address will not be published. Required fields are marked *

Back to top button