ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಗೆ ರೆಕ್ಕೆ ಬಂದಿದೆ. ಇದೇ ಮೊದಲ ಬಾರಿಗೆ ಹಳದಿ ಲೋಹದ ಬೆಲೆ 66,000 ರೂಪಾಯಿದ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿದೆ.
ಶನಿವಾರ ಒಂದೇ ದಿನ ಬೆಂಗಳೂರು ಮಾರ್ಕೆಟ್ನಲ್ಲಿ 10 ಗ್ರಾಂ ಶುದ್ಧ ಬಂಗಾರದ ಬೆಲೆಯಲ್ಲಿ 540 ರೂಪಾಯಿ ಹೆಚ್ಚಳ ಆಗಿದೆ. ಸದ್ಯ 10 ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆ 66,270 ರೂಪಾಯಿ ಆಗಿದೆ.
ಬೆಂಗಳೂರು ಮಾರ್ಕೆಟ್ನಲ್ಲಿ 10 ಗ್ರಾಂ ಆಭರಣ ಬಂಗಾರದ ಬೆಲೆಯಲ್ಲಿ 500 ರೂಪಾಯಿ ಹೆಚ್ಚಳ ಆಗಿದೆ. ಸದ್ಯ 10 ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂಪಾಯಿ ಆಗಿದೆ.
ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು?
ದಕ್ಷಿಣ ಭಾರತದಲ್ಲಿ ಮದುವೆ ಸೀಸನ್.. ಹೀಗಾಗಿ ಅತ್ಯಂತ ಮೌಲ್ಯಯುತ ಆಭರಣಗಳಲ್ಲಿ ಒಂದಾಗಿರುವ ಚಿನ್ನಕ್ಕೆ ಏಕಾಏಕಿ ಡಿಮ್ಯಾಂಡ್ ಹೆಚ್ಚಿದೆ. ಇದು ಸಹಜವಾಗಿಯೇ ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಐದು ದಿನಗಳಲ್ಲಿ 10 ಗ್ರಾಮ್ ಶುದ್ಧ ಚಿನ್ನದ ಬೆಲೆ 2180 ರೂಪಾಯಿ ಹೆಚ್ಚಾಗಿದೆ.
ಏಪ್ರಿಲ್ವರೆಗೂ ಮದುವೆಗಳ ಸೀಸನ್.. ಮೇ ತಿಂಗಳಲ್ಲಿ ಅಕ್ಷಯ ತೃತೀಯ ಇದೆ. ಇದು ರಿಟೇಲ್ ಜ್ಯುವೆಲ್ಲರಿ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚು ಮಾಡಲಿದೆ.
ಅಂತಾರಾಷ್ಟ್ರೀಯ ಮಾರ್ಕೆಟ್ನಲ್ಲೂ ಡಿಮ್ಯಾಂಡ್ – ಚಿನ್ನದ ಮೇಲೆ ಹೂಡಿಕೆ ಅತ್ಯಂತ ಸುರಕ್ಷಿತ ಹೂಡಿಕೆ
ಅಂತಾರಾಷ್ಟ್ರೀಯ ಮಾರ್ಕೆಟ್ನಲ್ಲಿಯೂ ಔನ್ಸ್ (31.10 ಗ್ರಾಮ್) ಚಿನ್ನದ ಬೆಲೆ ಗರಿಷ್ಠ ಮಟ್ಟ 2185 ಡಾಲರ್ ತಲುಪಿದೆ. ಅಂದ ಹಾಗೆ, ಬಂಗಾರದ ದರ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಲಿದೆ ಎಂಬುದು ನಿಪುಣರ ಮಾತಾಗಿದೆ. ಜಾಗತಿಕವಾಗಿ ಉಂಟಾಗ್ತಿರುವ ಆರ್ಥಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಈ ವರ್ಷದಲ್ಲೇ 10 ಗ್ರಾಮ್ ಶುದ್ಧ ಚಿನ್ನದ ಬೆಲೆ 72 ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಆರ್ಥಿಕ ಪರಿಸ್ಥಿತಿಗಳು ಮತ್ತಷ್ಟು ದಾರುಣವಾದರೇ ರಕ್ಷಣಾತ್ಮಕ ಆಸ್ತಿಗಳಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದ ಊಹೆ ಮೀರಿ ಚಿನ್ನದ ಬೆಲೆ ಹೆಚ್ಚಾಗಲಿದೆ.
ಅಮೆರಿಕಾ ತನ್ನ ಮಾನಿಟರಿ ಪಾಲಸಿಯನ್ನು ಈ ವರ್ಷದ ಕೊನೆಯಲ್ಲಿ ಕೊಂಚ ಸಡಿಲಿಕೆ ಮಾಡಲಿದೆ ಎಂಬ ಮಾರುಕಟ್ಟೆ ಪರಿಣಿತರ ಅಂದಾಜು ಕೂಡ ಚಿನ್ನದ ಬೆಲೆ ಗಗನಮುಖಿ ಆಗೋದಕ್ಕೆ ಕಾರಣ ಆಗಿದೆ.
2023ರಲ್ಲಿ ಚಿನ್ನದ ಮೇಲಿನ ಹೂಡಿಕೆಯಿಂದ ಶೇಕಡಾ 13ರಷ್ಟು ರಿಟರ್ನ್ಸ್ ಬಂದಿದೆ. ಹೀಗಾಗಿ ಹೂಡಿಕೆದಾರರಿಗೆ ಚಿನ್ನ ಆಕರ್ಷಣಿಯವಾಗಿ ಕಾಣುತ್ತಿದೆ. ಕಳೆದ ಐದು ವರ್ಷದಿಂದ ಭಾರತದಲ್ಲಿ ಬಂಗಾರದ ಡಿಮ್ಯಾಂಡ್ 700ರಿಂದ 800 ಮೆಟ್ರಿಕ್ ಟನ್ಗಳಷ್ಟಿದೆ. ಈ ವರ್ಷ ಬಂಗಾರದ ಡಿಮ್ಯಾಂಡ್ 800ರಿಂದ 900 ಟನ್ಗೆ ಹೆಚ್ಚಳ ಆಗಬಹುದು ಎಂದು ಅಂದಾಜಿಸಲಾಗಿದೆ.


