ಹಣಕಾಸು

ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳ..!

ಚಿನ್ನದ ಬೆಲೆಯಲ್ಲಿ ದರ ಎರಡು ದಿನ ಇಳಿಕೆ ಕಂಡು ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ.

ಮಾರ್ಚ್ ಮೊದಲ ವಾರದಲ್ಲಿ 7,940 ರೂ ನಷ್ಟಿದ್ದ ಚಿನ್ನದ ಬೆಲೆ, ಏಪ್ರಿಲ್ 1 ಕ್ಕೆ 8,510 ಗೆ ಏರಿಕೆ ಆಗಿದೆ. ಅಮೇರಿಕಾ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಪ್ರತಿ ಸುಂಕ ಜಾರಿಮಾಡುವ ಘೋಷಣೆ ಮಾಡಿದ ಬಳಿಕ ಏ.4 ರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ  ಅಲ್ಲೋಲ-ಕಲ್ಲೋಲ ಸೃಷ್ಟಿ ಆಗಿತ್ತು. ಚಿನ್ನದ ಬೆಲೆಯಲ್ಲಿ ಒಮ್ಮೆ ಭಾರೀ ಏರಿಕೆ, ಮತ್ತೊಮ್ಮೆ ಇಳಿಕೆ ಆಗುವ ಮೂಲಕ ಹಾವು ಏಣಿ ಆಟ ಮುಂದುವರಿದಿದೆ. ಇದೀಗ ಏಪ್ರಿಲ್ ಮೂರನೇ ವಾರದಲ್ಲೂ ಭರ್ಜರಿ ಬೆಲೆ ಏರಿಕೆ ಮುಂದುವರಿದಿದೆ.

ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ?

ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಗ್ರಾಂ ಚಿನ್ನಕ್ಕೆ 146 ರೂಪಾಯಿ ಹೆಚ್ಚಳವಾಗಿದೆ.10 ಗ್ರಾಂ ಚಿನ್ನಕ್ಕೆ 1,460 ಹೆಚ್ಚಳವಾಗಿದೆ.. 91 ಸಾವಿರ ಗಡಿ ದಾಟಿದ 10 ಗ್ರಾಂ ಚಿನ್ನದ ಬೆಲೆ ,ಸದ್ಯ 10 ಗ್ರಾಂ ಚಿನ್ನಕ್ಕೆ 92,142 ರೂ.

Comments (0)

Your email address will not be published. Required fields are marked *

Back to top button