ಹಳೆಯ ಮುತ್ತಿನ ಸರಕ್ಕೆ ನೀಡಿ ಹೊಸ ರೂಪ: ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿ 5 ಬಗೆಯ ಆಭರಣಗಳು!

ನಮ್ಮಲ್ಲಿ ಹೆಚ್ಚಿನವರ ಬಳಿ ಅಮ್ಮ ಅಥವಾ ಅಜ್ಜಿಯ ಕಾಲದ ಹಳೆಯ ಮುತ್ತಿನ ಸರಗಳು ಇದ್ದೇ ಇರುತ್ತವೆ. ಇವುಗಳನ್ನು ಧರಿಸಲು ಹಳೆಯ ಕಾಲದ ವಿನ್ಯಾಸ ಎನಿಸಬಹುದು ಅಥವಾ ದಾರ ಹಳೆಯದಾಗಿ ತುಂಡಾಗುವ ಹಂತದಲ್ಲಿರಬಹುದು. ಅಂತಹ ಸರಗಳನ್ನು ಮೂಲೆಗೆ ಎಸೆಯುವ ಬದಲು, ಸ್ವಲ್ಪ ಸೃಜನಶೀಲತೆ ಬಳಸಿದರೆ ಮನೆಯಲ್ಲೇ ‘ಡಿಸೈನರ್ ಜ್ಯುವೆಲ್ಲರಿ’ ತಯಾರಿಸಬಹುದು. ಹಣ ಉಳಿಸುವುದರ ಜೊತೆಗೆ ಟ್ರೆಂಡಿ ಲುಕ್ ಪಡೆಯಲು ಇಲ್ಲಿವೆ 5 ಅದ್ಭುತ ಐಡಿಯಾಗಳು.

ಸ್ಟೈಲಿಶ್ ಪರ್ಲ್ ಕಿವಿಯೋಲೆಗಳು
ಮುತ್ತಿನ ಸರದ ಮಣಿಗಳನ್ನು ಬೇರ್ಪಡಿಸಿ, ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಇಯರಿಂಗ್ ಹುಕ್ ಅಥವಾ ಸ್ಟಡ್ಗಳಿಗೆ ಜೋಡಿಸಿ. ಕೇವಲ ಒಂದು ಮುತ್ತನ್ನು ಬಳಸಿ ‘ಸಿಂಪಲ್ ಸ್ಟಡ್’ ಮಾಡಬಹುದು ಅಥವಾ ನಾಲ್ಕೈದು ಮುತ್ತುಗಳನ್ನು ಸಣ್ಣ ಚೈನ್ಗೆ ಪೋಣಿಸಿ ‘ಹ್ಯಾಂಗಿಂಗ್ ಇಯರಿಂಗ್ಸ್’ ತಯಾರಿಸಬಹುದು. ಇದಕ್ಕೆ ಸಣ್ಣ ಸ್ಟೋನ್ ಸೇರಿಸಿದರೆ ಪಾರ್ಟಿ ವೇರ್ ಆಗಿಯೂ ಇದು ಗಮನ ಸೆಳೆಯುತ್ತದೆ.
ಟ್ರೆಂಡಿ ಪರ್ಲ್ ಹೇರ್ ಆಕ್ಸೆಸರಿ
ಸರಳವಾದ ಹೇರ್ ಪಿನ್ ಅಥವಾ ಕ್ಲಚರ್ಗಳಿಗೆ ಗ್ಲೂ ಗನ್ ಸಹಾಯದಿಂದ ಮುತ್ತುಗಳನ್ನು ಅಂಟಿಸಿ. ಮದುವೆ ಅಥವಾ ಹಬ್ಬದ ಸಂದರ್ಭದಲ್ಲಿ ಜಡೆ ಅಥವಾ ಬನ್ಗೆ ಈ ಮುತ್ತಿನ ಪಿನ್ಗಳನ್ನು ಮುಡಿಯುವುದರಿಂದ ರಾಯಲ್ ಲುಕ್ ಸಿಗುತ್ತದೆ. ಹಳೆಯ ರಬ್ಬರ್ ಬ್ಯಾಂಡ್ಗಳಿಗೂ ಮುತ್ತುಗಳನ್ನು ಹೊಲಿಯುವ ಮೂಲಕ ಹೊಸ ರೂಪ ನೀಡಬಹುದು.

ಎಲಿಗೆಂಟ್ ಪರ್ಲ್ ಚೋಕರ್
ಈಗ ಚೋಕರ್ ನೆಕ್ಪೀಸ್ಗಳು ಫ್ಯಾಷನ್ನಲ್ಲಿವೆ. ಉದ್ದವಾದ ಸರವನ್ನು ನಿಮ್ಮ ಕುತ್ತಿಗೆಯ ಅಳತೆಗೆ ತಕ್ಕಂತೆ ಚಿಕ್ಕದಾಗಿಸಿ. ಇದರ ಮಧ್ಯಭಾಗದಲ್ಲಿ ಒಂದು ದೊಡ್ಡ ಪೆಂಡೆಂಟ್ ಅಥವಾ ಕುಂದನ್ ಪದಕವನ್ನು ಸೇರಿಸಿದರೆ, ಸರಳವಾದ ಮುತ್ತಿನ ಸರವು ತಕ್ಷಣವೇ ಐಷಾರಾಮಿ ಚೋಕರ್ ಆಗಿ ಬದಲಾಗುತ್ತದೆ.
ಪರ್ಲ್ ಬ್ರೇಸ್ಲೆಟ್ ಅಥವಾ ಕಂಕಣ
ಒಂದೇ ಅಳತೆಯ ಮುತ್ತುಗಳನ್ನು ಎಲಾಸ್ಟಿಕ್ ದಾರದಲ್ಲಿ ಪೋಣಿಸಿ ಸುಲಭವಾಗಿ ಬ್ರೇಸ್ಲೆಟ್ ತಯಾರಿಸಬಹುದು. ನೀವು ಇದನ್ನು ಸಿಂಗಲ್ ಲೇಯರ್ ಅಥವಾ 3-4 ಲೇಯರ್ಗಳಲ್ಲಿ ಮಾಡಿ ಕೈಗೆ ತೊಟ್ಟರೆ, ವೆಸ್ಟರ್ನ್ ಮತ್ತು ಎಥ್ನಿಕ್ ಉಡುಪುಗಳಿಗೆ ಇದು ಹೇಳಿಮಾಡಿಸಿದಂತಿರುತ್ತದೆ.

ಮಾಂಗ್ ಟೀಕಾ ಮತ್ತು ಹೇರ್ ಚೈನ್
ಕೆಲವೇ ಕೆಲವು ಮುತ್ತುಗಳನ್ನು ಸಣ್ಣ ಮೆಟಲ್ ಚೈನ್ ಜೊತೆ ಜೋಡಿಸಿ ಸುಂದರವಾದ ಮಾಂಗ್ ಟೀಕಾ (ನೆತ್ತಿ ಬೊಟ್ಟು) ಸಿದ್ಧಪಡಿಸಬಹುದು. ಇದನ್ನು ತಲೆಗೆ ಧರಿಸುವ ‘ಸೈಡ್ ಹೇರ್ ಚೈನ್’ ಆಗಿಯೂ ಬಳಸಬಹುದು. ಸಾಂಪ್ರದಾಯಿಕ ಉಡುಪುಗಳಿಗೆ ಇದು ಎಲಿಗೆಂಟ್ ಲುಕ್ ನೀಡುತ್ತದೆ.




