ಗರ್ಬಾ ನೃತ್ಯಕ್ಕೆ ಬರುವವರಿಗೆ ಗೋಮೂತ್ರ ಕೊಡಿ, ಹಿಂದೂಗಳಾದರೆ ಕುಡಿಯುತ್ತಾರೆ: ಬಿಜೆಪಿ ನಾಯಕ

“ಗರ್ಬಾ ಪೆಂಡಾಲ್ ಪ್ರವೇಶಿಸಲು ಅನುಮತಿಸುವ ಮೊದಲು ಪ್ರತಿಯೊಬ್ಬರೂ ಗೋಮೂತ್ರದೊಂದಿಗೆ ‘ಆಚಮನ್’ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಾವು (ಗರ್ಬಾ) ಸಂಘಟಕರನ್ನು ವಿನಂತಿಸಿದ್ದೇವೆ” ಎಂದು ಬಿಜೆಪಿಯ ಇಂದೋರ್ ಅಧ್ಯಕ್ಷ ಚಿಂಟು ವರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಭೋಪಾಲ್ ಅಕ್ಟೋಬರ್ 01: ಮಧ್ಯಪ್ರದೇಶದ (Madhya Pradesh) ಬಿಜೆಪಿ (BJP) ಮುಖಂಡರೊಬ್ಬರು ಗರ್ಬಾ (Garba)ಕಾರ್ಯಕ್ರಮಕ್ಕೆ ಮುಸ್ಲಿಮರು ಪ್ರವೇಶಿಸಿದಂತೆ ತಡೆಯಲು ಅಲ್ಲಿಗೆ ಬರುವವರಿಗೆ ಗೋಮೂತ್ರ ನೀಡಿ ಎಂಬ ಸಲಹೆ ನೀಡಿದ್ದಾರೆ. ಗರ್ಬಾ ಪೆಂಡಾಲ್ಗೆ ಜನರು ಪ್ರವೇಶಿಸುವ ಮೊದಲು ಅವರಿಗೆ ಗೋಮೂತ್ರ ನೀಡಿ, ಹಿಂದೂಗಳಾದರೆ ಕುಡಿಯುತ್ತಾರೆ. ಈ ಮೂಲಕ ನವರಾತ್ರಿಯಲ್ಲಿ ಹಿಂದೂಗಳು ಮಾತ್ರ ಗರ್ಬಾ ಪೆಂಡಾಲ್‌ಗಳನ್ನು ಪ್ರವೇಶಿಸುವುದನ್ನು ಇದು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
“ಆಧಾರ್ ಕಾರ್ಡ್ ಅನ್ನು ಎಡಿಟ್ ಮಾಡಬಹುದು, ಆದರೆ, ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದರೆ, ಅವನು ಗೋಮೂತ್ರದ ಆಚಮನದ ನಂತರವೇ ಗರ್ಬಾ ಪೆಂಡಾಲ್ ಪ್ರವೇಶಿಸುತ್ತಾನೆ ಮತ್ತು ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ” ಎಂದು ವರ್ಮಾ ಹೇಳಿದ್ದಾರೆ. ಹಿಂದೂ ಪದ್ಧತಿಗಳ ಪ್ರಕಾರ, ‘ಆಚಮನ್’ ಎಂದರೆ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಶುದ್ಧೀಕರಣಕ್ಕಾಗಿ ಮಂತ್ರಗಳನ್ನು ಪಠಿಸುವಾಗ ಒಂದು ಗುಟುಕು ನೀರನ್ನು ತೆಗೆದುಕೊಳ್ಳುವುದು.




