ವೈರಲ್ ನ್ಯೂಸ್ಸುದ್ದಿ

ಟಾಯ್ಲೆಟ್‌ ಬೇಸಿಸ್‌ನಲ್ಲಿ ಹೆಡೆ ಎತ್ತಿ ಕುಳಿತ ಹಾವು; ವಿಡಿಯೋ ವೈರಲ್‌

ಹಾವುಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಹೊಸದೆನಲ್ಲ. ಹೀಗೆ ಬೆಚ್ಚನೆಯ ಸ್ಥಳವನ್ನರಸುತ್ತಾ ಬರುವ ಹಾವುಗಳು ಮನೆಯಲ್ಲಿ ನಿಲ್ಲಿಸಿದ ಸ್ಕೂಟರ್‌, ಪಾದರಕ್ಷೆ ಅಥವಾ ಶೂ ಒಳಗೆ ಅವಿತು ಕೂರುತ್ತವೆ. ಇಂತಹ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್‌ ಅಗಿದ್ದು, ದೈತ್ಯ ಗಾತ್ರದ ಹಾವೊಂದು ಟಾಯ್ಲೆಟ್‌ ಬೇಸಿನ್‌ನಲ್ಲಿಯೇ ಹೆಡೆ ಎತ್ತಿ ಕುಳಿತಿದೆ. ಈ ದೃಶ್ಯವನ್ನು ಕಂಡು ಅಬ್ಬಬ್ಬಾ ಇನ್ನು ಮುಂದೆ ಶೌಚಾಲಯಕ್ಕೆ ಹೋಗುವಾಗ ಜೋಪಾನವಾಗಿರ್ಬೇಕು ಎಂದು ನೆಟ್ಟಿಗರು ತಮಾಷೆ‌ ಮಾಡಿದ್ದಾರೆ.

ಅಶೋಕ್‌ ಕುಮಾರ್‌ ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ದೈತ್ಯ ಹಾವೊಂದು ಟಾಯ್ಲೆಟ್‌ ಬೇಸಿನ್‌ನಲ್ಲಿ ಹೆಡೆ ಎತ್ತಿ ಕುಳಿತಿರುವ ಭಯಾನಕ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಬಾಲ್ಯದಲ್ಲಿ ಶೌಚಾಲಯಕ್ಕೆ ಹೋಗುವಾಗ ಬೇಸಿನ್‌ನಿಂದ ಹಾವು ಬಂದ್ರೆ ಏನು ಮಾಡೋದು ಅಂತ ಭಯ ಪಡ್ತಿದ್ವಿ, ಈಗ ಈ ಭಯ ನಿಜವಾಗಿಬಿಟ್ಟಿದೆ. ಇನ್ನು ಮುಂದೆ ಟಾಯ್ಲೆಟ್‌ಗೆ ಹೋಗುವಾಗ ಜೋಪಾನವಾಗಿರ್ಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ವೈರಲ್​​ ವಿಡಿಯೋ

 

ಜೂನ್‌ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 18.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯೋ ಇನ್ನೊಂದು ಹೊಸ ಭಯ ಹುಟ್ಟಿಕೊಂಡಿತುʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯ ತುಂಬಾ ಭಯಾನಕವಾಗಿದೆʼ ಎಂದು ಹೇಳಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button