ಕನ್ನಡದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ‘ಗಟ್ಟಿಮೇಳ’ ಸೀರಿಯಲ್ ನಾಯಕಿ ನಿಶಾ ರವಿಕೃಷ್ಣನ್ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಬ್ಯುಸಿಯಾಗಿದ್ದ ನಟಿ ಈಗ ಕನ್ನಡದ ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ.
‘ಕಾಂತಾರ’ ಖ್ಯಾತಿಯ ಪ್ರಮೋದ್ ಶೆಟ್ಟಿ ಮತ್ತು ಅವರ ಪತ್ನಿ ಸುಪ್ರೀತಾ ಇದೀಗ ಹೊಸ ಸೀರಿಯಲ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ‘ಅಣ್ಣಯ್ಯ’ ಎಂಬ ಸೀರಿಯಲ್ ಲಾಂಚ್ ಆಗ್ತಿದೆ. ಈ ಪ್ರಾಜೆಕ್ಟ್‌ಗೆ ನಿಶಾ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎನ್ನಲಾಗಿದೆ. ತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ನಿಶಾಗೆ ಹೀರೋ ಆಗಿ ಕೊಡಗಿನ ಕುವರ ವಿಕಾಶ್ ಉತ್ತಯ್ಯ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೋಮೋ ರಿವೀಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ರೌಡಿ ಬೇಬಿ ನಿಶಾ ಮತ್ತೆ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಮತ್ತೆ ‘ಗಟ್ಟಿಮೇಳ’ ನಟಿ ಕನ್ನಡ ಟಿವಿ ಸೀರಿಯಲ್ ರೀ ಎಂಟ್ರಿ ಕೊಡ್ತಿರೋದು ಸಹಜವಾಗಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com