ಧಾರವಾಡ: ಸರ್ಕಾರಿ ಸಾರಿಗೆ ಬಸ್ಸನಲ್ಲಿ ಪ್ರಯಾಣಿಸುವ ವಿಚಾರಕ್ಕೆ ಮಹಿಳೆಯೊಬ್ಬರು ಸರ್ಕಾರಿ ಸಾರಿ ಬಸ್ಸನ ಚಾಲಕ ಹಾಗೂ ನಿರ್ವಾಹನ ಕೊರಳ ಪಟ್ಟಿ ಹಿಡಿದು ದುರವರ್ತನೆ ತೋರಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದ ಬಳಿ ಕಳೆದ ದಿನ ನಡೆದಿದೆ.
ಬಾಗಲಕೋಟ ಯಿಂದ ನವಲಗುಂದ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸರ್ಕಾರಿ ಸಾರಿಗೆ ಬಸ್ಸ ಬರುತಿತ್ತು. ಯಮನೂರು ಗ್ರಾಮದ ಬಳಿ ಪ್ರಯಾಣಿಕರು ಇಳಿಯಲು ಬಸ್ಸ ಚಾಲಕ ನಿಲ್ಲಿಸಿದ್ದಾರೆ. ಪ್ರಯಾಣಿಕರು ಇಳುದರೂ ಕೂಡಾ ಸುಮಾರು 84 ಜನ ಪ್ರಯಾಣಿಕರು ಇದ್ದರು.
ನಿಂತುಕೊಂಡು ಯಾಕೆ ಬರ್ತೀರಾ, ಇನ್ನೊಂದು ಬಸ್ಸಿಗೆ ಬನ್ನಿ ಅಂತಾ ಬಸ್ಸ ಹತ್ತಲು ನಿಂತವರುಗೆ ನಿರ್ವಾಹಕ ತಿಳಿಸಿದ್ದಾರೆ. ಇದಕ್ಕೆ ಕೆರಳಿದ ಶಿವಾನಂದ ಪಡೆಸೂರ್, ಸವಿತಾ ಪಡೆಸೂರ್, ರೇಣುಕಾ ಮಣ್ಣೂರು ಎಂಬ ಮೂವರು, ಏನ್ ನಿಮಪ್ಪನ್ ಬಸ್. ಬೋಳಿಮಗನೇ ಬಸ್ ಒಂದ್ ತಾಸ್ ಲೇಟ್ ಆದರೂ ಹತ್ತಿಸಿಕೊಂಡು ಹೋಗು ಎನ್ನತ್ತಲೇ ನಿರ್ವಾಹಕನನ್ನು ಎಳೆದಾಡಿದ್ದಾರೆ.
ಅಲ್ಲದೆ ಅವಾಚ್ಯವಾಗಿ ನಿಂದಿಸುದ್ದು, ಶರ್ಟ್‌ನಲ್ಲಿದ್ದ ಹಣ ಬಿಸಾಡಿ ಮಹಿಳೆ ದುರವರ್ತನೆ ತೋರಿರುವುದು ಸ್ಥಳೀಯರು ಮೊಬೈಲನಲ್ಲಿ ಸೆರೆಯಾಗಿದೆ. ಈ ಕುರಿತು ಕಲಘಟಗಿ ವಾಕರಸಾಸಂ ಸಿಬ್ಬಂದಿ ಬಸ್ ನಿರ್ವಾಹಕ ಸಂಗಪ್ಪ. ನಿಂಗಪ್ಪ. ಚಿರಚನಕಲ್ ಎಂಬ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಶಕ್ತಿ ಯೋಜನೆ ಜಾರಿಯ ನಂತರ ಪ್ರಯಾಣಿಕರ ಹಾಗೂ ಬಸ್ಸ ಚಾಲಕರ ಮತ್ತು ನಿರ್ವಾಹಕರ ನಡುವೆ ಗುದ್ದಾಟಗಳು ನಡೆಯುತ್ತಲೇ ಇದ್ದು, ಯಾವಾಗ ಇದಕ್ಕೆ ಮುಕ್ತಿ ಎಂಬತಾಗಿದೆ.


