ಪದ್ಮನಾಭನಗರ: ಹನುಮಾನ್ ಚಾಲೀಸಾ ಸ್ಪೋರ್ಟ್ ಸ್ಕೃೆ ನಲ್ಲಿ ಯುತ್ ಫಾರ್ ಪರಿವರ್ತನ ಮತ್ತು ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತವಾಗಿ ಸ್ವರಕ್ಷಣಾ ಕಾರ್ಯಾಗಾರ ಮತ್ತು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಯುತ್ ಫಾರ್ ಪರಿವರ್ತನ ಸಂಸ್ಥೆಯ ಸಂಸ್ಥಾಪಕರಾದ ಅಮಿತ್ ಅಮರನಾಥ್ ರವರು, ಯೋಧ ರಾಕೇಶ್ ಯಾದವ್, ಪದಾಧಿಕಾರಿಗಳಾದ ಕೌಶಿಕ್ ದಯಾಳ್, ಶ್ರೀನಿವಾಸ್, ದಯಾ ಸಾಗರ್, ರಾಘವೇಂದ್ರ ಹೆಬ್ಬಾರ್, ಅಕ್ಷಿತ್, ಧಾತ್ರಿ, ನಿಹಾರಿಜಾರವರು ಉದ್ಘಾಟನೆ ಮಾಡಿದರು.
ಅಮಿತ ಅಮರನಾಥ್ ರವರು ಮಾತನಾಡಿ ಸಮಾಜದ ಸುಖ, ಶಾಂತಿ ನೆಮ್ಮದ್ದಿ ಬದುಕಲು ಸುರಕ್ಷತೆ ಮುಖ್ಯ. ಪುರುಷರು ಬಲಿಶಾಲಿಯಾಗಿರುತ್ತಾರೆ ಅದರೆ ಮಹಿಳೆಯರು ಬಲಿಶಾಲಿಯಾಗಿ ಮಾಡಲು ಮತ್ತು ಚಾಣಕ್ಷ, ಜಾಣ್ಮೆಯಿಂದ ಸಮಾಜದಲ್ಲಿರುವ ದುಷ್ಟ ಶಕ್ತಿ ವಿರುದ್ದ ಹೋರಾಟ ಮಾಡಲು ಆತ್ಮಸ್ಥೇರ್ಯ ತುಂಬಲು ಯುತ್ ಫಾರ್ ಪರಿವರ್ತನ ವತಿಯಿಂದ ಮಹಿಳೆಯರಿಗೆ ಸ್ವರಕ್ಷಣೆ ಮತ್ತು ಸುರಕ್ಷತೆ ಕುರಿತು ಉಚಿತವಾಗಿ ಕಾರ್ಯಾಗಾರ ಏರ್ಪಡಿಸಿದೆ. ಮಹಿಳೆಯರ ಮೇಲೆ ಹಲ್ಲೆ, ಚುಡಾಯಿಸುವುದು, ಸರಗಳ್ಳತನ ಮತ್ತು ಲೈಂಗಿಕ ಕಿರುಕುಳದ ವಿರುದ್ದ ಸಶಕ್ತವಾಗಿ ತನ್ನ ಶಕ್ತಿ ಬಳಸಿ ದುಷ್ಟರನ್ನ ಮಟ್ಟ ಹಾಕಲು ಮಹಿಳೆಯರಿಗೆ ತಂತ್ರಗಾರಿಕೆ, ಶಕ್ತಿಕೌಶಲ್ಯ ಕಲಿಸಲಾಗುತ್ತದೆ. ಮಹಿಳೆ ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕಲೆ ಸಾಹಿತ್ಯ ಚಲನಚಿತ್ರ ರಂಗದಲ್ಲಿ ಅದ್ಬುತ ಸಾಧನೆ ಮಾಡಿ ತೊರಿಸಿಕೊಟ್ಟಿದ್ದಾಳೆ.
ತನ್ನ ಸುರಕ್ಷತೆಗಾಗಿ ಯಾರ ಹಂಗು ಇಲ್ಲದೇ ತನ್ನ ಸ್ವಂತ ಬಲದಿಂದ ಸಾಧಿಸಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಸ್ವಯಂ ರಕ್ಷಣೆಗೆ ಹೇಳಿಕೊಡಲಾಗುತ್ತಿದೆ. ಇಂದು ಹೆಣ್ಣು ಅಬಲೆಯಲ್ಲ ಹೆಣ್ಣು ಸಬಲೆ ಎಂದು ಹೇಳಿದರು.
ಯೋಧ ರಾಕೇಶ್ ಯಾದವ್ ರವರು ಮಾತನಾಡಿ ಮಹಿಳೆಯರಿಗೆ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಕಲಿಯಬೇಕು ಇದರಿಂದ ತಂತ್ರಗಾರಿಕೆ, ಬುದ್ದಿವಂತಿಕೆಯಿಂದ ರಕ್ಷಣೆ ಮಾಡಿಕೊಳ್ಳಬಹುದು. ಯುವತಿಯರು ಮತ್ತು ಮಹಿಳೆಯರು ಒಬ್ಬಂಟಿಯಾಗಿ ಒಡಾಡುತ್ತಾರೆ ಅವರ ಸ್ವಂತ ಬಲದಿಂದ ಅವರ ರಕ್ಷಣೆ ಮಾಡಿಕೊಳ್ಳಬೇಕು. ಸರಗಳ್ಳತನ, ಹಲ್ಲೆ, ಗೂಂಡಗಿರಿ ದಾಳಿಯಾದಗ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು. ಮಹಿಳೆಯರ ಸ್ವರಕ್ಷಣೆ ಕಾರ್ಯಾಗಾರದಲ್ಲಿ ನೂರಾರು ಯುವತಿಯರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.