ವೈರಲ್ ನ್ಯೂಸ್ಸುದ್ದಿ

ಕೊಚ್ಚಿ ಹೋಗುತ್ತಿದ್ದ ಶ್ವಾನವನ್ನು ಕಾಪಾಡಿದ ಯುವತಿ ವಿಡಿಯೋ ವೈರಲ್

ಈ ಸಮಾಜ ಎಷ್ಟೇ ಮುಂದುವರೆದಿದ್ದರೂ ಮನುಷ್ಯರಾದ ನಮ್ಮಲ್ಲಿ ಮಾನವೀಯತೆ, ದಯಾ ಗುಣ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ನಾವು ಮಾಡುವ ಸಣ್ಣ ಸಹಾಯ ಹಾಗೂ ಮಾನವೀಯ ಕಾರ್ಯ ಇನ್ನೊಬ್ಬರ ಜೀವನವನ್ನೇ ಬೆಳಗಿಸುತ್ತದೆ. ಹೀಗೆ ತೊಂದರೆಗೀಡಾದ ಪ್ರಾಣಿಗಳನ್ನು ರಕ್ಷಿಸುವ, ಇತರರ ಸಹಾಯಕ್ಕೆ ಧಾವಿಸುವ ಮಾನವೀಯ ಗುಣವಿರುವ  ಹಲವು ಜನರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ನದಿ ನೀರಿನಲ್ಲಿ ಸಿಲುಕಿದ ಮುದ್ದಾದ ನಾಯಿ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾಳೆ.

ವೈರಲ್ ವಿಡಿಯೋದಲ್ಲಿ ಪುಟಾಣಿ ನಾಯಿಮರಿಯೊಂದು ಹರಿಯುವ ನೀರಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ದೃಶ್ಯವನ್ನು ಕಾಣಬಹುದು. ನೀರಿನ ರಭಸಕ್ಕೆ ಮೇಲೆ ಬರಲಾರದೆ ಅಲ್ಲೇ ನಿಂತು ಯಾರಾದರೂ ನನ್ನ ಪ್ರಾಣವನ್ನು ಕಾಪಾಡಿ ಎಂದು ಜೋರಾಗಿ ಅಳುತ್ತದೆ. ಶ್ವಾನ ಅಳುವ ಸದ್ದನ್ನು ಕೇಳಿ ಅಲ್ಲಿಗೆ ಧಾವಿಸಿದ ಯುವತಿಯೊಬ್ಬಳು ನೀರಿಗಿಳಿದು, ಶ್ವಾನವನ್ನು ನಿಧಾನಕ್ಕೆ ಸಮಾಧಾನಪಡಿಸಿ, ನೀರಿನಿಂದ ಶ್ವಾನವನ್ನು ಎತ್ತಿಕೊಂಡು ಬಂದು ಅದರ ಪ್ರಾಣ ರಕ್ಷಣೆ ಮಾಡಿದ್ದಾಳೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button