ಕ್ರೈಂ ಸ್ಟೋರಿರಾಜ್ಯಸುದ್ದಿ

ದುರಸ್ತಿಗೆ ಬಿಟ್ಟಿದ್ದ ರೈಲು ಬೋಗಿಯಲ್ಲಿ ಮಹಿಳೆ ಶವ ಪತ್ತೆ

ಹೊಸಪೇಟೆ: ರೈಲು ಬೋಗಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ ಆಘಾತಕಾರಿ ಘಟನೆ ಹೊಸಪೇಟೆ ರೈಲು ನಿಲ್ದಾಣದ ಬಳಿ ನಡೆದಿದೆ.

ದುರಸ್ತಿಗಾಗಿ ಬಿಟ್ಟಿದ್ದ ರೈಲ್ವೆ ಬೋಗಿಯಲ್ಲಿ ಅಂದಾಜು 35 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ನಾಲ್ಕೈದು ದಿನಗಳ ಹಿಂದೆ ರೈಲು ಬೋಗಿಯಲ್ಲಿ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೆಟ್ಟು ನಿಂತಿರೋ ರೈಲು ಬೋಗಿಯಲ್ಲಿ ಕೊಳೆತ ಸ್ಥಿತಿಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೈಲು ಬೋಗಿಯಲ್ಲಿ ತುಂಬಾ ದುರ್ನಾಥ ಬಂದ ಹಿನ್ನೆಲೆಯಲ್ಲಿ ಪೊಲೀಸರು ರೈಲು ಬೋಗಿ ಪರಿಶೀಲನೆ ವೇಳೆ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳ್ಳಾರಿ ರೈಲ್ವೆ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button