ಚಾಮರಾಜನಗರ: ಜನಪದ ಕಲೆಗಳ ತವರೂರು, ಅಭಯಾರಣ್ಯಗಳ ಹಸಿರು ಸಿರಿಯನಾಡು, ಕರುನಾಡಿನ ಗಡಿಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಸ್ಥಳೀಯ ಆಕರ್ಶಣೆಯ ಪ್ರಾಮುಖ್ಯತೆ ಬಿಂಬಿಸುವ ಮತಗಟ್ಟೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಚಾಮರಾಜನಗರ ಜಿಲ್ಲೆ ಶೇಕಡಾ 48% ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ, ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಅರಣ್ಯವಾಸಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಅರಣ್ಯ ವಾಸಿಗಳು ಬಳಸುವ ವಸ್ತುಗಳು, ಆಹಾರ ಪದ್ದತಿ, ಆಚಾರ ವಿಚಾರಗಳನ್ನು ಬಿಂಬಿಸುವಂತಹ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸುಂದರ ಪ್ರೇಕ್ಷಣೀಯ ಸ್ಥಳವಾದ ಭರಚುಕ್ಕಿ ಜಲಪಾತದ ಸೊಬಗನ್ನು ಮತಗಟ್ಟೆಯಲ್ಲಿ ಸೃಷ್ಟಿಸಲಾಗಿದೆ.
ಸತ್ತೇಗಾಲ ಗ್ರಾಮದ ಮತಗಟ್ಟೆ ಕಲ್ಪನೆಯಲ್ಲಿ ಭರಚುಕ್ಕಿಯನ್ನು ಮರುಸೃಷ್ಟಿಸಿ ಮತದಾರರನ್ನು ಆಕರ್ಷಿಸುವಂತಿದೆ. ಹೀಗೆ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ನದಾತರ ಆಕರ್ಷಣೆಗೆ ರೈತ ಮತಗಟ್ಟೆ, ಸಖೀ ಮತಗಟ್ಟೆಗಳು ಮತದಾರರನ್ನು ಆಕರ್ಷಿಸುವಂತೆ ಜಿಲ್ಲಾ ಚುನಾಣಾಧಿಕಾರಿಗಳು ವಿಶೇಷತೆಗೆ ನಾಂದಿ ಹಾಡಿದ್ದಾರೆ.