Thursday, May 1, 2025
25.2 C
Bengaluru
LIVE
ಮನೆUncategorizedಪತ್ರಕರ್ತ ವೀರೇಶ್ ನಿಧನ

ಪತ್ರಕರ್ತ ವೀರೇಶ್ ನಿಧನ

ಬಳ್ಳಾರಿ: ವಿಜಯ ಕರ್ನಾಟಕದ ಕಚೇರಿಯ ಉಪ ಸಂಪಾದಕ ವೀರೇಶ್ ಕಟ್ಟೆ ಮ್ಯಾಗಳ (42)ಹೃದಯಾಘಾತದಿಂದ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಪತ್ನಿ ಇಬ್ಬರು ಪುತ್ರಿಯರಿದ್ದಾರೆ. ಬಳ್ಳಾರಿಯಲ್ಲಿ ಪ್ರಜಾವಾಣಿ, ಈ ನಾಡು ಇಂಡಿಯಾದ ಅರೆ ಕಾಲಿಕ ವರದಿಗಾರರಾಗಿ ವೀರೇಶ್ ಸೇವೆ ಸಲ್ಲಿಸಿದ್ದರು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮಕ್ಕೆ ಸೇರಿದವರು ನಾಳೆ ಬಳ್ಳಾರಿ ತಾಲೂಕಿನ ಬೇವಿನಹಳ್ಳಿಯ ರುದ್ರಭೂಮಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ.

ಕೆಯುಡಬ್ಲ್ಯೂಜೆ ಸಂತಾಪ:

ಪತ್ರಕರ್ತ ವೀರೇಶ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ. ವೀರೇಶ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments