Wednesday, June 25, 2025
26.3 C
Bengaluru
Google search engine
LIVE
ಮನೆಸಿನಿಮಾಯುಐ' ಬಿಡುಗಡೆಗೆ ಕಾಯ್ತಿದ್ದವರಿಗೆ ಎಂತ ನ್ಯೂಸ್ ಕೊಟ್ರು ನೋಡಿ ಉಪೇಂದ್ರ

ಯುಐ’ ಬಿಡುಗಡೆಗೆ ಕಾಯ್ತಿದ್ದವರಿಗೆ ಎಂತ ನ್ಯೂಸ್ ಕೊಟ್ರು ನೋಡಿ ಉಪೇಂದ್ರ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಆದರೆ ಗ್ರಾಫಿಕ್ಸ್ ಕೆಲಸಗಳು ಜಾಸ್ತಿ ಇರುವ ಕಾರಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ.

ಎಲೆಕ್ಷನ್, ಐಪಿಎಲ್ ಬಿಸಿ ಕೂಡ ‘ಯುಐ’ ಚಿತ್ರಕ್ಕೆ ತಟ್ಟಿದೆ. ಹಾಗಾಗಿ ಇನ್ನು ಎರಡು ತಿಂಗಳು ಸಿನಿಮಾ ಬಿಡುಗಡೆ ಆಗುವುದು ಅನುಮಾನ. ಬಹಳ ಅದ್ಧೂರಿಯಾಗಿ ‘ಯುಐ’ ಸಿನಿಮಾ ನಿರ್ಮಾಣವಾಗುತ್ತಿದೆ. ಮನೋಹರ್ ಜೊತೆ ಸೇರಿ ಕೆ. ಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

ಈಗಾಗಲೇ ‘ಟ್ರೋಲ್’ ಸೂಪರ್ ಹಿಟ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಪ್ರಪಂಚದ ಆಗುಹೋಗುಗಳನ್ನೆಲ್ಲಾ ಸೇರಿಸಿ ಉಪ್ಪಿ ತಮ್ಮದೇ ಸ್ಟೈಲ್‌ನಲ್ಲಿ ‘ಯುಐ’ ಕಥೆ ಎಣೆದಿದ್ದಾರೆ. ಆದರೆ ಸದ್ಯಕ್ಕೆ ಈ ಸಿನಿಮಾ ಬಿಡುಗಡೆ ಲಕ್ಷಣಗಳು ಕಾಣುತ್ತಿಲ್ಲ. ಆದರೆ ‘ಯುಐ’ ಸಿನಿಮಾ ತಡವಾದರೆ ಏನು? ಉಪ್ಪಿ ಆಲ್‌ಟೈಮ್ ಫೇವರಿಟ್ ಸಿನಿಮಾವೊಂದು ಹೊಸ ರೂಪದಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ಸಮೇತ ರಿಯಲ್ ಸ್ಟಾರ್ ಇದನ್ನು ಖಚಿತಪಡಿಸಿದ್ದಾರೆ.

ಬಿ. ಜಗನ್ನಾಥ್ ಹಾಗೂ ಬಿ. ಜಿ ಮಂಜುನಾಥ್ ನಿರ್ಮಾಣದ ‘ಎ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಉಪ್ಪಿ ತಮ್ಮ ವಿಭಿನ್ನ ಆಲೋಚನೆಗಳನ್ನು ತೆರೆಗೆ ತಂದು ಗೆದ್ದಿದ್ದರು. ಸಿನಿಮಾದೊಳಗೆ ಒಂದು ಸಿನಿಮಾ ಮಾಡುವ ಕಥೆಯನ್ನು ಹೇಳಿದ್ದರು. ಗುರುಕಿರಣ್ ಸಂಗೀತ ಚಿತ್ರಕ್ಕೆ ಜೀವಾಳವಾಗಿತ್ತು. ಅಂದಾಜು 1.25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಅವತ್ತಿನ ಕಾಲಕ್ಕೆ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

ನಟ ಉಪೇಂದ್ರಗೆ ಹೀರೊ ಆಗಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಇದು. ಟೈಟಲ್‌ನಿಂದಲೇ ಸಿನಿಮಾ ಬಹಳ ಕುತೂಹಲ ಮೂಡಿಸಿತ್ತು. ಆಲ್ಬಮ್ ಹಿಟ್ ಆಗಿ ನಿರೀಕ್ಷೆ ಹೆಚ್ಚಾಗುತ್ತು. ಸಾಮಾನ್ಯವಾಗಿ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಕೊಡುತ್ತದೆ. ಏ, ಯು, ಯು/ಎ ಸರ್ಟಿಫಿಕೇಟ್ ಕೊಡುತ್ತಾರೆ. ಕೆಲವರು ಎ ಸಿಕ್ಕರೆ ಅದನ್ನು ಪೋಸ್ಟರ್ ಮೇಲೆ ಹಾಕಲು ಹಿಂದುಮುಂದು ನೋಡುತ್ತಾರೆ. ಆದರೆ ‘ಎ’ ಎನ್ನುವ ಟೈಟಲ್‌ನಲ್ಲೇ ರಿಯಲ್ ಸ್ಟಾರ್ ಸಿನಿಮಾ ಮಾಡಿ ಗೆದ್ದಿದ್ದರು.

‘ಎ’ ಚಿತ್ರದಲ್ಲಿ ಚಾಂದಿನಿ, ಅರ್ಚನಾ ನಾಯಕಿಯರಾಗಿ ನಟಿಸಿದ್ದರು. ‘ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎನ್ನುವ ಕ್ಯಾಪ್ಷನ್ ಕೊಟ್ಟು ‘ಎ’ ಚಿತ್ರವನ್ನು ಪ್ರಚಾರ ಮಾಡಲಾಗಿತ್ತು. ಸಿನಿಮಾ ತೆಲುಗಿಗೂ ಡಬ್ ಆಗಿ ಹಿಟ್ ಆಗಿತ್ತು. ಇನ್ನು ಚಿತ್ರದ ಆರಂಭದಲ್ಲೇ ಗಣೇಶನ ವಿಗ್ರಹಕ್ಕೆ ಗನ್ ಇಟ್ಟು ಉಪೇಂದ್ರ ಹೇಳಿದ್ದ ಡೈಲಾಗ್‌ಗಳು ವೈರಲ್ ಆಗಿತ್ತು. ತಮ್ಮದೇ ಶೈಲಿಯಲ್ಲಿ ಬಹಳ ವಿಚಿತ್ರವಾಗಿ ಫಿಲಾಸಫಿ ಹೇಳಿದ್ದರು. ಎಲ್ಲಾ ಸೇರಿ ಸಿನಿಮಾ ಹಿಟ್ ಆಗಿತ್ತು.

ಡಿಜಿಟಲ್ ರೂಪದಲ್ಲಿ ಇದೀಗ ‘ಎ’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಮುಂದಿನ ವಾರವೇ ಸಿನಿಮಾ ಮತ್ತೆ ಬೆಳ್ಳಿ ಪರದೆ ಅಲಂಕರಿಸುತ್ತಿದ್ದು ಈಗಾಗಲೇ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments