ಬೆಂಗಳೂರು: ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ ಇಂದು ರಾತ್ರಿ 8 ಗಂಟೆ ನಂತರ ಪೋರ್ಟ್ ಸಿಲಿಕಾನ್ ಸಿಟಿ ಜನರಿಗೆ ಸರ್ಕಾರದ 108 ಅಂಬ್ಯೂಲೆನ್ಸ್ ಸಿಗಲ್ಲ. ಸರ್ಕಾರದ ವೇತನ ಕಡಿತ ಹಾಗೂ ವೇತನ ನೀಡದ ಹಿನ್ನೆಲೆ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿಯಿಂದ ಮತ್ತೆ ಮುಷ್ಕರಕ್ಕೆ ಸಜ್ಜು.
ಇಂದು ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ ಅಂಬ್ಯೂಲೆನ್ಸ್ ಸೇವೆ ಬಂದ್. ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಬ್ಬಂದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೂರು ತಿಂಗಳ ವೇತನ ಬಾಕಿ ಹಿನ್ನೆಲೆ ಮುಷ್ಕರಕ್ಕೆ ಸಜ್ಜಾಗುತ್ತಿರುವ ಸಿಬ್ಬಂದಿ ವೇತನ ಸಿಗದೇ 108 ಸಿಬ್ಬಂದಿಗಳ ಜೀವನ ಹೈರಾಣಾಗಿದೆ.
ಒಂದು ಕಡೆ ಮೂರು ತಿಂಗಳಿಂದ ಸಂಬಳವಿಲ್ಲ. ಮತ್ತೊಂದು ಕಡೆ ವೇತನ ಕಡಿತಗೊಳಿಸಿರೋ ಜಿವಿಕೆ ಸಂಸ್ಥೆ. ಸುಮಾರು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿ ಇಟ್ಟುಕೊಂಡಿದೆ. ಇಂದು ಸಂಜೆಯೊಳಗೆ ಪಾವತಿ ಮಾಡುವಂತೆ ಅರೋಗ್ಯ ಇಲಾಖೆಗೆ ಮನವಿ ಮಾಡಲಿದ್ದಾರೆ. ಕಡಿತ ಮಾಡಿದ ವೇತನವನ್ನು ಬಿಡುಗಡೆ ಮಾಡಬೇಕು. ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘದಿಂದ ಮನವಿ.
ರಾತ್ರಿ 8 ಗಂಟೆಯಿಂದ ರಾಜ್ಯದ 3500 ಅರೋಗ್ಯ ಕವಚ ಸಿಬ್ಬಂದಿಗಳಿಂದ ಮುಷ್ಕರ. 108 ಆಂಬ್ಯೂಲೆನ್ಸ್ ಡ್ರೈವರ್ ಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 711 ಅಂಬ್ಯೂಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತಿದೆ. ಇಂದು ರಾತ್ರಿಯಿಂದ ಅಷ್ಟು ಅಂಬ್ಯೂಲೆನ್ಸ್ ಗಳ ಸಂಚಾರ ಬಂದ್ ಆಗಲಿವೆ.
ಏನಾದ್ರು ರೋಗಿಗಳಿಗೆ ತೊಂದರೆಯಾದ್ರೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಆರೊಗ್ಯ ಇಲಾಖೆ 108 ಪದಾಧಿಕಾರಿಗಳ ಸಭೆ ಕರೆದಿದ್ದಾರೆ, 108 ಮೂರು ಸಂಘದ ಪದಾಧಿಕಾರಿಗಳ ಸಭೆ ಕರೆದ ಆರೋಗ್ಯ ಇಲಾಖೆ ಡಿಡಿ ಪ್ರಭು ಗೌಡ . ಕಳೆದ ಐದು ತಿಂಗಳಿಂದ 108 ಸಿಬ್ಬಂದಿಗಳಿಗೆ ಹಣಪಾವತಿಸದ ಆರೋಗ್ಯ ಇಲಾಖೆ . ಇಂದು ಹಣ ಪಾವತಿಸದಿದ್ದರೆ 108 ಮುಷ್ಕರ ವಾಪಾಸ್ ಪಡೆಯದಿರಲು ನಿರ್ಧಾರಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು 711, 108 ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನರಿಗಿಂತ ಜನಪ್ರಿಯತೆಯ ವ್ಯಸನವೇ ಹೆಚ್ಚು. ಬರ ನಿರ್ವಹಣೆಗಿಂತ ಬೇಜವಾಬ್ದಾರಿಯೇ ಜಾಸ್ತಿ. ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡಿದ್ದೇವೆನ್ನುವ ಇವರಿಗೆ 108 ಆಂಬುಲೆನ್ಸ್ ಚಾಲಕರಿಗೆ ಸಂಬಳ ಕೊಡಲಿಕ್ಕೂ ಹಣವಿಲ್ಲ! ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಈ ಚಾಲಕರಿಗೆ ಸಂಬಳದ ಗ್ಯಾರಂಟಿ ಕೊಡಲು ಸಾಧ್ಯವಾಗಿಲ್ಲ. 3 ತಿಂಗಳಿಂದ ಅವರಿಗೆ ವೇತನ ಪಾವತಿ ಮಾಡಿಲ್ಲ ಎಂದರೆ ನಾಚಿಕೆಗೇಡು!” ಎಂದು ವಾಗ್ದಾಳಿ ಮಾಡಿದರು.
https://twitter.com/JanataDal_S/status/1787382554401849401?ref_src=twsrc%5Etfw%7Ctwcamp%5Etweetembed%7Ctwterm%5E1787382554401849401%7Ctwgr%5Eb8a458766af2b577fe185c532f08130e26b4ba0e%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-news-in-kannada-108-ambulance-staff-payment-hold-hd-kumarswamy-slams-karnataka-government-vkb-827235.html