ಬೇಸಿಗೆ ಎಂದರೆ ಮಾವಿನಹಣ್ಣಿನ ಕಾಲ. ಈ ಕಾಲದಲ್ಲಿ ಬಗೆ ಬಗೆ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಾಗಂತ ಮಾವಿನಹಣ್ಣುಗಳನ್ನೇ ತಿನ್ನುತ್ತಿದ್ದರೆ ನಿಮಗೆ ಬೇಸರ ಬರಬಹುದು. ಹಾಗಿದ್ದಾಗ ನೀವು ಮಾವಿನಹಣ್ಣಿನಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು. ಇದು ಮಕ್ಕಳಿಂದ ದೊಡ್ಡವವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ಮಾವಿನಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ, ಇದರ ಪರಿಮಳ ರುಚಿಗೆ ಮನ ಸೋಲದವರಿಲ್ಲ. ಏಪ್ರಿಲ್, ಮೇ ತಿಂಗಳ ಎಂದರೆ ಹಣ್ಣುಗಳ ರಾಜ ಮಾವಿನದ್ದೇ ದರ್ಬಾರು. ಹಾಗಂತ ಪ್ರತಿದಿನ ಮಾವಿನಹಣ್ಣು ತಿಂದರೆ ಬೇಸರ ಮೂಡಬಹುದು. ಅದಕ್ಕಾಗಿ ನೀವು ಮಾವಿನಹಣ್ಣಿನಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು. ನೀವು ಈ ಬಾರಿ ಮಾವಿನ ಸೀಸನ್‌ನಲ್ಲಿ ವಿಶೇಷ ರೆಸಿಪಿಗಳನ್ನು ತಯಾರಿಸುವ ಬಯಕೆ ನಿಮಗಿದ್ದರೆ ಇಲ್ಲಿದೆ ಒಂದಿಷ್ಟು ರೆಸಿಪಿಗಳು.
ಮಾವಿನಹಣ್ಣಿನ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿಗಳು: ಮಾವಿನಹಣ್ಣು 3 ಮಧ್ಯಮ ಗಾತ್ರದ್ದು, ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ, ಕ್ರೀಮ್ – 3 ರಿಂದ 4 ಕಪ್, ವೆನಿಲ್ಲಾ ಎಕ್ಸಾರ್ಟ್, ಹಾಲು – 1 ಕಪ್,
ಮಾವಿನಹಣ್ಣಿನ ಐಸ್‌ಕ್ರೀಮ್ ತಯಾರಿಸುವ ವಿಧಾನ: ಮಾವಿನಹಣ್ಣುಗಳ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬ್ಲೆಂಡರ್‌ನಲ್ಲಿ ಹೆಚ್ಚಿದ ಮಾವಿನಹಣ್ಣುಗಳನ್ನು ಹಾಕಿ. ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣ ಯಾವುದೇ ಗಂಟುಗಳಿಲ್ಲದಂತೆ ನುಣ್ಣಗಿನ ಪೇಸ್ಟ್ ಆಗಬೇಕು. ಒಂದು ದೊಡ್ಡ ಬೌಲ್‌ನಲ್ಲಿ 4 ಕಪ್ ಕ್ರೀಮ್ ಸೇರಿಸಿ. ಕ್ರೀಮ್ ದಪ್ಪಗಿದ್ದರೆ ಎಲೆಕ್ಟ್ರಿಕ್ ಬೀಟರ್‌ನಿಂದ ತೆಳ್ಳನೆಯ ರೂಪಕ್ಕೆ ತನ್ನಿ. ಕ್ರೀಮ್ ಒಂದು ಹದಕ್ಕೆ ಬಂದ ಮೇಲೆ ಮಾವು ಕಂಡೆನ್ಸ್ಡ್ ಮಿಲ್ಕ್ ಸೇರಿಸಿದ ಮಿಶ್ರಣವನ್ನು ಅದಕ್ಕೆ ಹಾಕಿ. ಅದಕ್ಕೆ 1/2 ಟೇಬಲ್ ಚಮಚ ವೆನ್ನಿಲಾ ಎಕ್ಸ್ಟಾರ್ಟ್ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ವಿಸ್ಕ್ ಮಾಡಿ. ಈ ಮಿಶ್ರಣ ಎಲ್ಲವೂ ಚೆನ್ನಾಗಿ ಬೆರೆತ ನಂತರ 3 ಟೇಬಲ್ ಚಮಚ ಹಾಲು ಸೇರಿಸಿ ಮತ್ತೆ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಅಲ್ಯೂಮಿನಿಯಂ ಹಾಳೆ ಹಾಸಿರುವ ಅಗಲ ಬಾಯಿ ಇರುವ ಪಾತ್ರೆಯ ಮೇಲೆ ಸುರಿಯಿರಿ. ಇದನ್ನು 7 ರಿಂದ 8 ಗಂಟೆಗಳ ಕಾಲ ಫ್ರಿಜರ್‌ನಲ್ಲಿಡಿ. ಈಗ ನಿಮ್ಮ ಮುಂದೆ ರುಚಿಯಾದ ಮಾವಿನಹಣ್ಣಿನ ಐಸ್‌ಕ್ರೀಮ್ ತಿನ್ನಲು ಸಿದ್ಧ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com