2019ರ ಏಪ್ರಿಲ್ 1ರಿಂದ ಹೊಸ ವಾಹನಗಳಿಗೆ ಶೋ ರೂಂಗಳಲ್ಲೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತಿದೆ. ಅದಕ್ಕೂ ಮುನ್ನ ನೋಂದಣಿಯಾಗಿರುವ ಹಳೆ ನೋಂದಣಿ ಫಲಕಗಳೇ ಇವೆ. ರಾಜ್ಯದಲ್ಲಿಅಂತಹ ಸುಮಾರು 2 ಕೋಟಿ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರ ವಾಹನಗಳು, ಶೇ.20ರಷ್ಟು ಲಘು ವಾಹನಗಳು (ಎಲ್‌ಎಂವಿ) ಮತ್ತು ಶೇ.10ರಷ್ಟು ಸಾರಿಗೆ ವಾಹನಗಳು ಸೇರಿವೆ.
ಈ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಮೊದಲಿಗೆ 2023ರ ನ.17ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಇದಕ್ಕೆ ವಾಹನ ಮಾಲೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ2024ರ ಫೆ.17ರವರೆಗೆ ಗಡುವು ವಿಸ್ತರಿಸಲಾಯಿತು. ನಂತರ ಮತ್ತೊಮ್ಮೆ ಮೇ 31ರವರೆಗೆ ಗಡುವು ವಿಸ್ತರಣೆಯಾಯಿತು. ಎರಡು ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆ ಆದೇಶ ಪಾಲನೆಗೆ ಹಿಂದೇಟು ಹಾಕುತ್ತಿದ್ದಾರೆ.
ಎಚ್‌ಎಸ್‌ಆರ್‌ಪಿ ಫಲಕವಿಲ್ಲದ ವಾಹನಗಳಿಗೆ ಮೇ 31ರ ನಂತರ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಹೇಳಿದೆ. ಎಚ್‌ಎಸ್‌ಆರ್‌ಪಿ ನಿಯಮದ ಮೊದಲ ಉಲ್ಲಂಘನೆಗೆ 500 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ನಂತರ ಸಾರಿಗೆ ಇಲಾಖೆ ಸಿಬ್ಬಂದಿ ಅಥವಾ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದಾಗ ಪ್ರತಿ ಸಲವೂ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. 1.62 ಕೋಟಿ ಹಳೇ ವಾಹನಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ನಿಜಕ್ಕೂ ದಂಡ ವಿಧಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಎಚ್‌ಎಸ್‌ಆರ್‌ಪಿ ಅಳವಡಿಕೆ ಕುರಿತು ವ್ಯಾಪಕ ಪ್ರಚಾರ ನಡೆಸದ ಕಾರಣ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಮನೆ ಮಾಡಿದೆ. ನಂಬರ್ ಪ್ಲೇಟ್ ಎಲ್ಲಿಸಿಗುತ್ತದೆ? ಅದನ್ನು ಅಳವಡಿಸುವವರು ಯಾರು? ಅದರ ಬಳಕೆಯಿಂದ ಲಾಭ ಏನು ಎಂಬ ಬಗ್ಗೆ ಗ್ರಾಮೀಣ ಜನರಿಗೆ ಇನ್ನೂ ಮಾಹಿತಿ ಇಲ್ಲ. ಎಚ್‌ಎಸ್‌ಆರ್‌ಪಿ ಬಗ್ಗೆ ಸಾರಿಗೆ ಇಲಾಖೆಯು ಸಾರ್ವಜನಿಕರಧಿಲ್ಲಿಜಾಗೃತಿ ಮೂಡಿಸಬೇಕಿದೆ. ಆದರೆ, ಈವರೆಗೂ ಅಂತಹ ಪ್ರಯತ್ನ ನಡೆದಿಲ್ಲ. ಹಲವು ವಾಹನ ಮಾಲೀಕರು ನಿತ್ಯವೂ ಸ್ಥಳೀಯ ಆರ್‌ಟಿಒ ಕಚೇರಿಗಳಿಗೆ ಹೋಗಿ ಎಚ್‌ಎಸ್‌ಆರ್‌ಪಿ ಬಗ್ಗೆ ವಿಚಾರಿಸುವುದು ಸಾಮಾನ್ಯವಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com