ಶ್ರೀರಾಮನವಮಿಯ ಶುಭಾಶಯಗಳು: ಸನಾತನ ಧರ್ಮದಲ್ಲಿ ಜನರು ಶ್ರೀ ರಾಮಚಂದ್ರನ ಬಗ್ಗೆ ಅಚಲವಾದ ನಂಬಿಕೆ ಮತ್ತು ಭಕ್ತಿ ಹೊಂದಿದ್ದಾರೆ. ಇಂದು ಆಚರಿಸುವ ರಾಮ ನವಮಿಯ ಪವಿತ್ರ ಹಬ್ಬ ರಾಮನಿಗೆ ಸಮರ್ಪಿಸಲಾಗಿದೆ. ಈ ವಿಶೇಷ ಹಬ್ಬವನ್ನು ರಾಮನ ಜನ್ಮದಿನವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ.
ವಿಶ್ವ ಪೋಷಕ ರಾಮನ ಅನುಗ್ರಹವನ್ನು ಪಡೆಯಲು ಭಕ್ತರು ರಾಮನವಮಿಯಂದು ವಿಧಿವಿಧಾನಗಳೊಂದಿಗೆ ಆತನನ್ನು ಪೂಜಿಸುತ್ತಾರೆ. ಈ ದಿನ ರಾಮನನ್ನು ಪೂಜಿಸುವುದರ ಜೊತೆಗೆ, ಭಕ್ತರು ಕೆಲವು ನಿಯಮಗಳನ್ನು ಅನುಸರಿಸುತ್ತಾರೆ. ಈ ದಿನ ಕೆಲ ಕೆಲಸವನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಾದರೆ ರಾಮ ನವಮಿಯಂದು ಯಾವ ಕೆಲಸ ಮಾಡಬಾರದು.
ರಾಮ ನವಮಿ 2024 ದಿನಾಂಕ
ರಾಮ ನವಮಿ 2024 ದಿನಾಂಕ ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ನವಮಿ ತಿಥಿ ಮಂಗಳವಾರ ಏಪ್ರಿಲ್ 16 ರಂದು ಮಧ್ಯಾಹ್ನ 1:23 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಏಪ್ರಿಲ್ 17 ರಂದು ಬುಧವಾರ ಮಧ್ಯಾಹ್ನ 3:15 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ರಾಮ ನವಮಿಯ ಪವಿತ್ರ ಹಬ್ಬವನ್ನು ಮುಖ್ಯವಾಗಿ ಏಪ್ರಿಲ್ 17 ರಂದು ಆಚರಿಸಲಾಗುತ್ತದೆ.