ಬೆಂಗಳೂರು: ಶಿವರಾಜ್ಕುಮಾರ್ ಅವರ ನಿಜವಾದ ಹೆಸರು ಎಂ ಎಸ್ ಪುಟ್ಟಸ್ವಾಮಿ. ಇದೇ ಹೆಸರಲ್ಲಿ ವಿವರ ಇದೆ. 2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಅದೇ ವರ್ಷ ಗೀತಾ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ.
ಶಿವರಾಜ್ಕುಮಾರ್ ಅವರು ಚಿತ್ರರಂಗದ ಬೇಡಿಕೆಯ ಹೀರೋ ಆಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪತ್ನಿ ಗೀತಾ ಅವರ ಪರವಾಗಿ ಶಿವಣ್ಣ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈಗ ಗೀತಾ ಶಿವಮೊಗ್ಗದಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಿವಣ್ಣ ಅವರ ಆಸ್ತಿ ಬಗ್ಗೆಯೂ ಮಾಹಿತಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಶಿವರಾಜ್ಕುಮಾರ್ ಅವರ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಇದೇ ಹೆಸರಲ್ಲಿ ವಿವರ ಇದೆ. 2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಅದೇ ವರ್ಷ ಗೀತಾ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಕೈಯಲ್ಲಿ ಎಷ್ಟು ಕ್ಯಾಶ್ ಇದೆ ಎಂಬ ವಿವರವನ್ನೂ ನೀಡಲಾಗಿದೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದೆ. ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ.
ಬ್ಯಾಂಕ್ ಬ್ಯಾಲೆನ್ಸ್ ವಿವರವನ್ನೂ ನೀಡಲಾಗಿದೆ. ಶಿವರಾಜ್ಕುಮಾರ್ ಬಳಿ ಬ್ಯಾಂಕ್ ಬ್ಯಾಲೆನ್ಸ್ 4.82 ಕೋಟಿ ರೂಪಾಯಿ ಇದೆ. ಗೀತಾ ಅವರ ಬ್ಯಾಂಕ್ ಬ್ಯಾಲೆನ್ಸ್ 64 ಲಕ್ಷ ರೂಪಾಯಿ ಇದೆ. ಶಿವಣ್ಣ ಬಳಿ 18 ಕೋಟಿ ರೂಪಾಯಿ ಹಾಗೂ ಗೀತಾ ಬಳಿ 5 ಕೋಟಿ ರೂಪಾಯಿ ಚರಾಸ್ತಿ ಇದೆ. ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಶಿವಣ್ಣ ಬಳಿ 31 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಗೀತಾ ಬಳಿ 34 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ