Wednesday, January 28, 2026
17 C
Bengaluru
Google search engine
LIVE
ಮನೆವೈರಲ್ ನ್ಯೂಸ್ಹಂದಿಯ ಕಿಡ್ನಿ ಅಳವಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, 2 ತಿಂಗಳ ನಂತರ ಸಾವು!

ಹಂದಿಯ ಕಿಡ್ನಿ ಅಳವಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, 2 ತಿಂಗಳ ನಂತರ ಸಾವು!

ಅಮೇರಿಕಾ : ಹಂದಿ ಕಿಡ್ನಿ ಅಳವಡಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ದಾಖಲೆಗೆ ಕಾರಣನಾದ ರಿಚರ್ಡ್ ಸ್ಲೇಮನ್ ಅವರು ಈ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ಬಳಿಕ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಅಮೆರಿಕಾದ ಮೂಲದ 62 ವರ್ಷ ಪ್ರಾಯದ ರಿಚರ್ಡ್ ಸ್ಲೇಮನ್ ಅವರಿಗೆ 2 ತಿಂಗಳ ಹಿಂದೆ ಮಾರ್ಚ್ 21 ರಂದು ತಳೀಯವಾಗಿ ಮಾರ್ಪಡಿಸಿದ ಹಂದಿಯ ಕಿಡ್ನಿಯನ್ನು ಅಳವಡಿಸಲಾಗಿತ್ತು. ಬೋಸ್ಟನ್‌ನ ಮ್ಯಾಸಚುಸೆಟ್ಸ್‌ನ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆ ನಡೆದ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು.

ಡಯಲಿಸೀಸ್‌ನಲ್ಲಿನ ಸಮಸ್ಯೆಯಿಂದಾಗಿ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು. ಹೀಗಾಗಿ ಅವರು ಹಂದಿ ಕಿಡ್ನಿ ಕಸಿಗೆ ಒಳಗಾಗಲು ಬಯಸಿದ್ದರು. ‘ಇದು ಕೇವಲ ನನಗೆ ಮಾತ್ರ ಸಹಾಯ ಮಾಡುವುದಿಲ್ಲ, ಇದು ಬದುಕಲು ಕಿಡ್ನಿ ಕಸಿಗೆ ಒಳಗಾಗಲೇಬೇಕು ಎಂಬ ಸ್ಥಿತಿಯಲ್ಲಿರುವ ಅನೇಕರಿಗೆ ಒಂದು ಭರವಸೆಯ ಮಾರ್ಗವಾಗಿದೆ ಎಂದು ಅವರು ಕಸಿ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಒಂದು ಜಾತಿಯಿಂದ ಇನ್ನೊಂದಕ್ಕೆ ಅಂಗಗಳನ್ನು ಕಸಿ ಮಾಡುವ ವಿಧಾನವನ್ನು ಕ್ಸೆನೋಟ್ರಾನ್ಸ್ಪ್ಲಾಂಟೇಶನ್ ಎಂದು ಕರೆಯಲಾಗುತ್ತದೆ. ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.

2018 ರಲ್ಲಿ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸ್ಲೇಮನ್ ಎಂಬ ವ್ಯಕ್ತಿಗೆ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಲಾಯಿತು. ಆದರೆ ಐದು ವರ್ಷಗಳ ನಂತರ ಅದು ವಿಫಲವಾಯಿತು.ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅವರು ಸಾವಿಗೀಡಾಗಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments