ಚೆನ್ನೈ: ಹೌದು, ಚಿತ್ರರಂಗಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿತ್ತು. 13 ರಂದು ಚೆನ್ನೈನ ವೇಲ್ಸ್ ಯೂನಿವರ್ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.
ಅಭಿಮಾನಿಗಳು ಡಾಕ್ಟರ್ ರಾಮ್ ಚರಣ್ ಎಂದು ಕರೆಯಲು ಆರಂಭಿಸಿದ್ದು. ಖುಷಿ ಪಟ್ಟಿದ್ದಾರೆ. ಸದ್ಯ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಚುನಾವಣೆ ಕುರಿತ ಕಥಾವಸ್ತುವನ್ನು ಈ ಚಿನಿಮಾ ಹೊಂದಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಮೈಸೂರಿನಲ್ಲಿಯೂ ‘ಗೇಮ್ ಚೇಂಜರ್’ ಶೂಟಿಂಗ್ ಆಗಿದೆ ಎಂಬುದು ವಿಶೇಷ.
https://twitter.com/AlwaysAkashRC/status/1778422807153795322?ref_src=twsrc%5Etfw%7Ctwcamp%5Etweetembed%7Ctwterm%5E1778422807153795322%7Ctwgr%5E99188bb8cb798e92537454014aa3c242c512cbb2%7Ctwcon%5Es1_&ref_url=https%3A%2F%2Fhosadigantha.com%2Factor-ram-charan-gets-honorary-doctorate-fans-are-happy%2F