ಹಾಸನ: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎಸ್ಐಟಿ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸಿದ್ದರಾಮಯ್ಯ, ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…— Siddaramaiah (@siddaramaiah) April 27, 2024
ಸಿಎಂ ಸಿದ್ದರಾಮಯ್ಯ ಎಸ್ ಐಟಿ ತನಿಖೆಗೆ ಆದೇಶ ಮಾಡಿದ ಬೆನ್ನಲ್ಲೆ ಸಚಿವ ಪ್ರಿಯಾಂಕ್ ಖರ್ಗೆರವರು ಟ್ವಿಟ್ ಮಾಡಿ ಮೋದಿಯ ಕಾಲೆಳೆದ್ದಿರೆ.
ಪ್ರೀತಿಯ ನರೇಂದ್ರ ಮೋದಿಯವರೆ ಮತ್ತೊಮ್ಮೆ ಕರ್ನಾಟಕಕ್ಕೆ ಸ್ವಾಗತ ನಿವು ರಾಜ್ಯದಲ್ಲಿ ಇದ್ದಿರಾ ,ಮಂಗಳ ಸೂತ್ರ,ಮುಸ್ಲಿಂ ಮೀಸಲಾತಿ,ಪ್ರಣಾಳಿಕೆ ಸುಳ್ಳುಗಳನ್ನು ಬಿತ್ತುವ ಬದಲು ಕನ್ನಡಿಗರಿಗೆ ಸತ್ಯಾಂಶ ಹೇಳಿ ನೂರಾರು ಮಹಿಳೆಯರಿಗೆ ಪ್ರೆಜ್ವಲ್ ರೇವಣ್ಣ ದೌರ್ಜನ್ಯ ಎಸಗಿದ ಬಗ್ಗೆ ಗೊತ್ತಿದ್ದರೂ ಟಿಕೆಟ್ ಯಾಕೆ ನೀಡಿದಿರಿ.
ಕರ್ನಾಟಕ ಬಿಜೆಪಿ ಹಾಗೂ ಭಾರತದ ಉಳಿದ ನಾಯಕರು ಯಾವಾಗ ಬೀದಿಗಿಳಿದು ಹೋರಾಟ ಮಾಡಿ ನೊಂದವರಿಗೆ ನ್ಯಾಯ ಕೋಡಿಸುತ್ತಿರಿ ಎಂದು ಬಿಜೆಪಿ ಮುಖಂಡರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳಿಗೈದ ಸಚಿವ ಪ್ರಿಯಾಂಕ್ ಖರ್ಗೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.
Dear @narendramodi avare,
Welcome to Karnataka once again.
While you are here, instead of fabricating lies about:
– Mangalsutras
– Muslim reservations
– ManifestoTell Kannadigas the truth about:
– Why you gave the Hassan parliamentary ticket to a JDS candidate, despite… https://t.co/joNpg7BZ8F
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 28, 2024