ಚಿತ್ರದುರ್ಗ: ಬರಗಾಲದ ಬಿಸಿಲಿಗೆ ತತ್ತರಿಸಿದ್ದು, ಅಡಿಕೆ ಬೆಳೆ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಅಂತರ್ಜಲ ಪಾತಾಳ ಸೇರಿದ್ದು, 600–700 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಇಲ್ಲವಾಗಿದೆ. ದೂರದ ಊರುಗಳಿಂದ ನೀರು ಖರೀದಿಸಿ ಟ್ಯಾಂಕರ್ ಮೂಲಕ ತಂದು ಅಡಿಕೆ ತೋಟಕ್ಕೆ ನೀರುಣಿಸುವ ಪರಿಸ್ಥಿತಿ ಎದುರಾಗಿದೆ.
ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಗೊಲ್ಲರಹಟ್ಟಿ ರೈತ ರಾಮಣ್ಣ ಇವರು ತಮ್ಮ ೨ ಎಕರೆ ಪ್ರದೇಶದಲ್ಲಿ1000 ಅಡಿಕೆ ಹಾಗೂ 100 ಕ್ಕೂ ಹೆಚ್ಚು ತೆಂಗಿನಗಿಡ ನೆಟ್ಟು ಪೋಷಣೆ ಮಾಡಿ ಈಗಾ 4 ವರ್ಷ ಕಳೆದಿವೆ ಇನ್ನೆ ಫಸಲಿಗೆ ಬರುವ ಸಮಯ ಆದರೆ, ಈ ವರ್ಷ ಮಳೆ ಕೊರತೆಯಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ.
ಅಡಿಕೆ ಗಿಡಗಳು ಒಣಗಲಾರಭಿಸಿವೆ. ಅಡಿಕೆ ಬೆಳೆ ಉಳಿಸಿಕೊಳ್ಳಲು ಕೊಳೆವೆಬಾವಿ ಕೊರೆಯಿಸಿದರೂ ನೀರು ಬರಲಿಲ್ಲ, ಇದರಿಂದ ದಾರಿ ಕಾಣದೆ ರೈತ ಪ್ರತಿದಿನ ಟ್ಯಾಂಕರ್ ಮೂಲಕ ಅಡಿಕೆ ಹಾಗೂ ತೆಂಗಿನ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ .
ಒಣಗುವ ಗಿಡಿ ಉಳಿಸಿಕೊಳ್ಳಲು ನೀರು ಖರೀದಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದು ಎಷ್ಟೆ ದೂರವಾದರೂ ನೀರು ತಂದು ತೋಟ ಉಳಿಸಿಕೊಳ್ಳುವುದು ಮುಂದಾಗಿದ್ದಾರೆ.
ಪ್ರತಿದಿನ ನಾಲ್ಕು ಟ್ಯಾಂಕರ್ ಲೋಡು ನೀರು ತಂದು ಗಿಡಗಳಿಗೆ ಹಾಕುತ್ತೇವೆ ಎಂದು. ರೈತ ರಾಮಣ್ಣನ ಪತ್ನಿ ಶಾಂತ ಕುಮಾರಿ ತಿಳಿಸಿದರು.