Tuesday, January 27, 2026
26.7 C
Bengaluru
Google search engine
LIVE
ಮನೆರಾಜಕೀಯಪ್ರಯಾಣಿಕರನ್ನು ಹೊತ್ತು ಸಾಗುವ ವಿನೂತನ ‘ಪಲ್ಲಕ್ಕಿ’

ಪ್ರಯಾಣಿಕರನ್ನು ಹೊತ್ತು ಸಾಗುವ ವಿನೂತನ ‘ಪಲ್ಲಕ್ಕಿ’

ಬೆಂಗಳೂರು: ಪ್ರಯಾಣಿಕರನ್ನು ಇನ್ನು ಮುಂದೆ ‘ಪಲ್ಲಕ್ಕಿ’ಯಲ್ಲಿ ಹೊತ್ತು ಸಾಗಿಸುವ ತಯಾರಿಯಲ್ಲಿದೆ KSRTC. ಬರೋಬ್ಬರಿ 13.5 ಮೀ ಉದ್ದದ ಹವಾ ನಿಯಂತ್ರಿತ ಸ್ಲೀಪರ್ ಬಸ್ ಪರೀಕ್ಷಿಸಿ ಫಿದಾ ಆಗಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಬಸ್ ವಿನ್ಯಾಸ, ಸೌಲಭ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಸ್ ಬಗ್ಗೆ ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳ ಜೊತೆ ನಡೆಸಿರುವ ಚರ್ಚೆ ಕುತೂಹಲ ಕೆರಳಿಸಿದೆ.

ಅಶೋಕ್ ಲೇಲ್ಯಾಂಡ್ ಕಂಪನಿಯು 13.5 ಮೀ ಉದ್ದದ 36 ಬರ್ತ್ ಸಾರ್ಮಥ್ಯವುಳ್ಳ ಹವಾ ನಿಯಂತ್ರಿತ ಪೂರ್ಣ ನಿರ್ಮಿತ ಸ್ಲೀಪರ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ವಾಹನವನ್ನು‌ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಶನಿವಾರ ಪರಿವೀಕ್ಷಣೆ ನಡೆಸಿದರು‌ ಬಸ್ಸಿನ ಒಳಾಂಗಣ ಹಾಗೂ ಹೊರಾಂಗಣವನ್ನು ವೀಕ್ಷಿಸಿ, ಪರಿಶೀಲಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈಗಾಗಲೇ KSRTCಯಲ್ಲಿ ಇದೇ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ಸುಗಳನ್ನು ಪಲ್ಲಕ್ಕಿ ಎಂಬ ಹೆಸರಿನೊಂದಿಗೆ ಪ್ರಾರಂಭಿಸಲಾಗಿದೆ. ಇನ್ನೂ 40 ಬಸ್ಸುಗಳ ಖರೀದಿಗೆ ಈಗಾಗಲೇ ಆದೇಶ ನೀಡಲಾಗಿದೆ. ಈ ಮಾದರಿಯ ಬಸ್ಸುಗಳು ಖಾಸಗಿಯವರೊಂದಿಗೆ ಪೈಪೋಟಿ ‌ನೀಡಲು ಸಾರಿಗೆ ಸಂಸ್ಥೆಗೆ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು. ಇತ್ತಿಚಿನ ದಿನಗಳಲ್ಲಿ ಪ್ರಯಾಣಿಕರು ಉತ್ತಮ ದರ್ಜೆಯ ಸೇವೆಯನ್ನು ನಿರೀಕ್ಷಿಸುತ್ತಾರೆ ಎಂದು ಅವರು ತಿಳಿಸಿದರು.

ಪಲ್ಲಕಿ’ಯ ವೈಶಿಷ್ಟ್ಯಗಳು ಹೀಗಿವೆ:

  • ಬಸ್ಸು ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ ಮೇ: ಅಶೋಕ್ ಲೇಲ್ಯಾಂಡ್ 13.5 ಮೀ ಮಾದರಿಯ ವಾಹನವು ಪ್ರಯಾಣಿಕರಿಗೆ ವಿಹಂಗಮ ನೋಟದ ವೈಭವವನ್ನು ನೀಡುತ್ತದೆ, ಪ್ರತಿ ಪ್ರಯಾಣಿಕರಿಗೆ ವಿಶಾಲವಾದ ಆಸನಗಳನ್ನು ಒದಗಿಸಿ, ಆರಾಮದಾಯಕ ಪ್ರಯಾಣದ ಸೌಲಭ್ಯವನ್ನು ಒದಗಿಸುತ್ತದೆ.

  • 36 ಬರ್ತ್ 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ.

  • ಪಿಯು ಫೋಮ್ ಸ್ಲೀಪರ್ ಆಸನ ಜೊತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ರೆಕ್ಸೀನ್ನಿಂದ ಹೊದಿಸಲಾಗಿದೆ.

  • ಬರ್ತ್ ಕ್ಯುಬಿಕಲ್ ಇಂಟಿಗ್ರೇಟೆಡ್ ಪರಿಕರಗಳು- ರೀಡಿಂಗ್ ಲೈಟ್ಸ್- 2 ಸಂಖ್ಯೆಗಳು, ಏರ್ ವೆಂಟ್ಸ್, 02 USB ಪೋರ್ಟ್ ಮತ್ತು ಮೊಬೈಲ್ ಹೋಲ್ಡರ್ ವ್ಯವಸ್ಥೆಗೊಳಿಸಲಾಗಿದೆ.

  • ವಾಹನದ ಹೊರಭಾಗದ ಭವ್ಯತೆಗೆ ಹೆಡ್-ಲೈಟ್ಗಳು ವಿಶಿಷ್ಟವಾದ ಸೊಬಗನ್ನು ನೀಡುತ್ತದೆ.

  • 64*97 ಆಳತೆಯ ವಿಶಾಲವಾದ ವಿಂಡ್ ಶೀಲ್ಡ್ ನಿಂದಾಗಿ ಡ್ರೈವರ್ ಗೆ ವರ್ಧಿತ ದೃಶ್ಯತೆಯನ್ನು ಖಾತ್ರಿಗೊಳಿಸುತ್ತದೆ, ಇದರಿಂದಾಗಿ ಡ್ರೈವಿಂಗ್ ಕುಶಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ.

  • ಶಕ್ತಿಯುತ ಹ್ಯಾಲೊಜೆನ್ ಹೆಡ್ಲೆಲೈಟ್ನೊಂದಿಗೆ ದಿನ ಚಾಲನೆಯಲ್ಲಿರುವ ಐಇಆ ದೀಪಗಳಿವೆ.

  • ಗರಿಷ್ಠ ಪ್ಯಾಸೆಂಜರ್ ಕಾರ್ಗೋ ಶೇಖರಣೆಗಾಗಿ ಸುಮಾರು 10m3 ನ ಲಗೇಜ್ ಸಾಮರ್ಥ್ಯ ಒದಗಿಸಲಾಗಿದೆ.

  • ಬಾಗಿದ ಡ್ಯಾಶ್ಬೋರ್ಡ್ ಸೂಕ್ತ ಸ್ಥಳದಲ್ಲಿ ಅಳವಡಿಕೆಯಾಗಿ ಶಾಂತ, ಸ್ವಚ್ಛ ಹಾಗೂ ಚಾಲಕನ ಕಾರ್ಯಕ್ಕೆ ಉತ್ತಮ ಕಾರ್ಯ ಸ್ಥಳವನ್ನು ನೀಡಿದೆ.

  • ಚಾಲಕ ಕ್ಯಾಬಿನ್ ವಿನ್ಯಾಸವು ಸುಲಭ ಪ್ರವೇಶ ಮತ್ತು ಗರಿಷ್ಠ ಚಾಲಕನ ಸೌಕರ್ಯಕ್ಕಾಗಿ ವಿನ್ಯಾಸಿಸಲಾಗಿದೆ.

  • ಅಭಯಂತ್ರ: A-Series BS-VI 4 Cylinder with I-Gen Technology ಅಭಯಂತ್ರ ಹಾಗೂ 248 ಶಕ್ತಿಯುತ ಎಂಜಿನ್ ಹೊಂದಿದೆ.

  • EGR + SCR ಹೊರಸೂಸುವಿಕೆ ನಿಯಂತ್ರಣ ವ್ಯವಸ್ಥೆ ಒದಗಿಸಲಾಗಿದೆ.

  • ಸುಧಾರಿತ ಸಸ್ಪೆನ್ಶನ್: ಇದು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ.

     

    ಜಾಹೀರಾತು ನೀಡಲು ಸಂಪರ್ಕಿಸಿ

    Phone Number : +91-9164072277
    Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments