Thursday, January 29, 2026
24.2 C
Bengaluru
Google search engine
LIVE
ಮನೆರಾಜಕೀಯತಮ್ಮ ಎನಿಮೇಟೆಡ್ ಡ್ಯಾನ್ಸ್‌ ವಿಡಿಯೋ ನೋಡಿ ಖುಷಿಪಟ್ಟ ಮೋದಿ

ತಮ್ಮ ಎನಿಮೇಟೆಡ್ ಡ್ಯಾನ್ಸ್‌ ವಿಡಿಯೋ ನೋಡಿ ಖುಷಿಪಟ್ಟ ಮೋದಿ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇದೀಗ ದೇಶದಲ್ಲಿ ಲೋಕಸಭೆ ಚುನಾವಣೆಯ ಅಬ್ಬರ ಇರುವುದರಿಂದ ರಾಜಕಾರಣಿಗಳನ್ನೂ ಟ್ರೋಲ್​ ಮಾಡಲಾಗುತ್ತಿದೆ. ಅಂಥ ಒಂದು ವಿಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

​ಪ್ರಧಾನಿ ನರೇಂದ್ರ ಮೋದಿ ಅವರ ಎನಿಮೇಟೆಡ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಾಪ್​ ಸ್ಟಾರ್​ ಒಬ್ಬರು ವೇದಿಕೆ ಮೇಲೆ ನೃತ್ಯ ಮಾಡಿರುವ ವಿಡಿಯೋಗೆ ಕೃತಕ ಬುದ್ಧಿಮತ್ತೆ  ತಂತ್ರಜ್ಞಾನ ಸಹಾಯದಿಂದ ಅದಕ್ಕೆ ಮೋದಿ ಅವರ ಚಹರೆ ಬಳಸಿ ವ್ಯಕ್ತಿಯೊಬ್ಬರು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ವಿಡಿಯೋ ಗಮನಿಸಿರುವ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಎಕ್ಸ್‌ ಖಾತೆಯಲ್ಲಿ ರಿ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಹಾಗೇ ನಾನೂ ಕೂಡ ನನ್ನ ಎನಿಮೇಟೆಡ್​ ಡ್ಯಾನ್ಸ್​ ನೋಡಿ ಆನಂದಿಸಿದ್ದೇನೆ. ಚುನಾವಣೆಯ ಬಿಡುವಿನಲ್ಲಿ ಇಂತಹ ವಿಡಿಯೋ ನಿಜಕ್ಕೂ ಖುಷಿ ನೀಡಿತು” ಎಂದು ಬರೆದಿದ್ದಾರೆ.

https://twitter.com/narendramodi/status/1787523212374393082

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments