ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಈಗಾಗಲೇ ಬಂಧಿತರಾಗಿದ್ದು, ಇದರಿಂದಾಗಿ ದರ್ಶನ್ ಮುಂದಿನ ಚಿತ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂಬ ಚರ್ಚೆ ಗಾಂಧಿನಗರದಲ್ಲಿ ಎದ್ದಿದೆ.
ಸತತ ಸೋಲುಗಳ ಬಳಿಕ ಕಳೆದ ವರ್ಷ ತೆರೆಕಂಡ ಕಾಟೇರ ಹಿಟ್ ಆಗಿತ್ತು.. ದರ್ಶನ್ ಮಾರ್ಕೆಟ್ ಹೆಚ್ಚಾಗಿತ್ತು.. ಬಲ್ಲ ಮಾಹಿತಿಗಳ ಪ್ರಕಾರ ಸದ್ಯಕ್ಕೆ ದರ್ಶನ ಅವರ ಬಳಿ ನಾಲ್ಕು ಸಿನಿಮಾಗಳಿವೆ..
ಡೆವಿಲ್ ಇವರ 57ನೇ ಚಿತ್ರ. ಮಿಲನ ಪ್ರಕಾಶ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.. ಚಿತ್ರದ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದೆ.. ಈ ವರ್ಷದ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಉದ್ದೇಶವನ್ನು ನಿರ್ಮಾಪಕರು ಹೊಂದಿದ್ದರು..
ದರ್ಶನ್ ಜೊತೆಗೆ ಕರಿಯ ಸಿನಿಮಾ ಮಾಡಿದ್ದ ನಿರ್ದೇಶಕ ಪ್ರೇಮ್ ಕೂಡ, 58ನೇ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು.. ಕೆ ವಿ ಎನ್ ನಿರ್ಮಾಣ ಸಂಸ್ಥೆಯ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಮುಂದಿನ ವರ್ಷ ಸೆಟ್ಟೇರಲಿತ್ತು.. ಅದು ದರ್ಶನ್ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಬಜೆಟ್ ನ ಸಿನಿಮಾ ಎಂದು ಮೂಲಗಳು ಹೇಳಿತ್ತು.
ಕಾಟಿರ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರಿಗೆ ತಮ್ಮ 59ನೇ ಸಿನಿಮಾವನ್ನು ನಿರ್ದೇಶಿಸಲು ದರ್ಶನ್ ಕಾಲ್ ಶೀಟ್ ಕೊಟ್ಟಿದ್ರು.. ಈ ಚಿತ್ರವನ್ನು ಬಿ. ಸುರೇಶ್, ಬಿ. ಹರಿಕೃಷ್ಣ ಅವರ ಸಂಸ್ಥೆ ನಿರ್ಮಾಣ ಮಾಡೋ ಪ್ಲಾನ್ ಹೊಂದಿತ್ತು.
ನಿರ್ಮಾಪಕ ಸೂರಪ್ಪ ಬಾಬು ಕೂಡ, ಮುಂಗಡ ಹಣವನ್ನು ದರ್ಶನ್ ಗೆ ನೀಡಿದ್ದಾರೆ.. ಇದಲ್ಲದೆ,ಈ ಹಿಂದೆಯೇ ಮುಂಗಡ ಹಣ ನೀಡಿದ್ದ ಕೆಲವು ನಿರ್ಮಾಪಕರು ದರ್ಶನ್ ಕಾಲ್ ಶೀಟ್ ಕಾಗಿ ಕಾಯುತ್ತಿದ್ದಾರೆ ಎನ್ನುತ್ತಿದೆ ದರ್ಶನ್ ಆಪ್ತ ವಲಯ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com