ಮಡಿಕೇರಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕೆಲವು ವಿಡಿಯೋಗಳು ನೋಡುಗರ ಮನಸ್ಸನ್ನು ಗೆದ್ದುಬಿಡುತ್ತವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಮೇಲೆ ಮಾನವೀಯತೆ ತೋರುವ ವಿಡಿಯೋಗಳು ಇನ್ನೂ ಹತ್ತಿರವಾಗುತ್ತವೆ. ಇಂತಹ ಹೃದಯಸ್ಪರ್ಶಿ ಘಟನಾವಳಿ ಕಣ್ಣ ಮುಂದೆ ನಡೆದರೆ ಹೇಗಿರುತ್ತದೆ…? ಇದಕ್ಕೊಂದು ನಿದರ್ಶನದ ವಿಡಿಯೋ ಇಲ್ಲಿದೆ.
ಮಡಿಕೇರಿ ವ್ಯಾಪ್ತಿಯಲ್ಲಿ ಸೆಸ್ಕ್ ನ ಪವರ್ ಮ್ಯಾನ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಚಾನಾಕಾಗಿ ಮರ್ಕಟದ ಮರಿಯೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ವಿದ್ಯುತ್ ಸ್ಪರ್ಶಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಕೋತಿಯನ್ನು ಕೂಡಲೇ ಪವರ್ ಮ್ಯಾ ನ್ ಗಳಾದ ಶಿವಣ್ಣ ಮತ್ತು ಅಭಿಷೇಕ್ ಅವರುಗಳು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಕೊಡಿಸುವ ಮೂಲಕ ಅದರ ಜೀವ ಉಳಿಸುವಲ್ಲಿ ಮಾನವೀಯತೆ ಮೆರೆದರು.ವಿದ್ಯುತ್ ಆಘಾತದಿಂದ ನೋವುಂಡರೂ ತಂಟೆ ಮಾಡದೇ ಕೋತಿ ಮರಿ ಚಿಕಿತ್ಸೆಗೆ ಸ್ಪಂದಿಸಿದೆ. ಪವರ್ ಮ್ಯಾನ್ ಗಳ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com