ನವದೆಹಲಿ: ಕಾರಿನಲ್ಲಿ ಬರೋಬ್ಬರಿ 30ಕ್ಕೂ ಅಧಿಕ ಕುರಿ, ಆಡುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಕುರಿ, ಆಡುಗಳನ್ನು ರಕ್ಷಿಸಿರುವ ಪ್ರಕರಣ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.
ಮಾರುತಿ ಸುಝುಕಿ ಸ್ವಿಪ್ಟ್ ಡಿಝರ್ ಕಾರಿನೊಳಗೆ 30ಕ್ಕೂ ಅಧಿಕ ಆಡು, ಕುರಿಗಳನ್ನು ತುಂಬಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕಾರಿನೊಳಗಿದ್ದ ಆಡು, ಕುರಿಗಳನ್ನು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದರು,
दिल्ली थाना सिविल लाइन्स में एक पीसीआर कॉल प्राप्त हुई थी जिसमें बताया गया था कि ग्रे रंग की स्विफ्ट कार में बड़ी मात्रा में बकरियां रखी गई हैं
पुलिस ने जांच की स्विफ्ट कार में 30 बकरियां और एक भेड़ रखी गई थी,कार को जानवरों सहित डीएसपीसीए, तीस हजारी में आगे की आवश्यक कार्रवाई के… pic.twitter.com/R2yxPdMRHI— Lavely Bakshi (@lavelybakshi) April 24, 2024