ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದಕ್ಕೆ ಹೆಚ್ಚಾಗ್ತಿದೆ. ಕೆಲವು ದಿನಗಳಿಂದೆ ಮಹಿಳೆಯನ್ನು ಬಲಿಪಡೆದಿದ್ದ ಕಾಡಾನೆಯನ್ನು ಆರಣ್ಯ ಇಲಾಖೆ ಎಡೆಮುರಿ ಕಟ್ಟಿದೆ. ಕಾಡಾನೆಗೆ ರೆಡಿಯೋ ಕಾಲರ್ ಆಳವಡಿಸಿ ನಾಗರಹೊಳೆ ಕಾಡಿಗೆ ಬಿಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಜನ ಭಯದಲ್ಲಿ ಜೀವನ ಕಳೆಯುವಂತಾಗಿದ್ದು ಕಾಡಾನೆಗಳ ದಾಳಿ ತಪ್ಪಿಸಲು ಆರಣ್ಯ ಮುಂದಾಗಿದೆ. ಕೆಲವು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಇನ್ನೂ ಮನುಷ್ಯರನ್ನು ಬಲಿಪಡೆದ ಕಾಡಾನೆಗಳನ್ನು ರೇಡಿಯೋ ಕಾಲರ್ ಹಾಕಿ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಎರಡು ದಿನಗಳಿಂದ ನಿರಂತರ ಕಾರ್ಯಚರಣೆ ನಡೆಸಿದ ಆರಣ್ಯ ಇಲಾಖೆ ಮುಂಜಾನೆ ಆನೆ ಪತ್ತೆಹಚ್ಚಲಾಗಿದೆ. ಮಾವುತರು, ಕಾವಾಡಿಗಳು ಸಾಕಾನೆಗಳ ಸಹಾಯದಿಂದ ವೈದ್ಯರು ಕಾಡಾನೆಗಳ ಮೇಲೆ ಅರಿವಳಿಕೆ ಪ್ರಯೋಗಿಸಿ ಅವುಗಳನ್ನು ಪ್ರಜ್ಞೆ ತಪ್ಪಿಸಿ ನಂತರ ಸ್ವಲ್ಪ ದೂರ ಹೋಗಿ ಬೀಳುತ್ತದೆ ನಂತರ ಸಾಕಾನೆಗಳ ಸಹಾದಿಂದ ಹಗ್ಗ ಕಟ್ಟಿ ನೀರು ಹಾಕಿ ಮತ್ತೆ ಚಿಕಿತ್ಸೆ ನೀಡಿ ಸೆರೆಹಿಡಿಯಲಾಗಿದೆ.
ವಿರಾಜಪೇಟೆ ತಾಲ್ಲೂಕಿನ ಅವರೆಗುಂದ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಬೀಡು ಬಿಟ್ಟದ್ದ ಕಾಡಾನೆಗಳ ಗುಂಪನ್ನು ಚದುರಿಸಿ ದಾಳಿ ಮಾಡಿದ್ದ ಕಾಡಾನೆಯನ್ನು ಗುರುತ್ತಿಸಿ ಅರವಳಿಕೆ ಮದ್ದು ನೀಡಿ ಬಂಧನ ಮಾಡಗಿದೆ.
50ಕ್ಕೂ ಹೆಚ್ಚು ಆರಣ್ಯ ಸಿಬ್ಬಂದಿ ಮತ್ತು ಅಭಿಮನ್ಯು ನೇತ್ರತ್ವದಲ್ಲಿ 6 ಸಾಕಾನೆಗಳನ್ನು ಬಳಸಿ ಅರವಳಿಕೆ ಮದ್ದು ನೀಡಿ ಆನೆಗಳ ಸಹಾಯದಿಂದ ಸೆರೆಹಿಡಿಯಲಾಗಿದೆ. ಆನೆಗೆ ಆರಣ್ಯ ಇಲಾಖೆ ರೇಡಿಯೊ ಕಾಲರ್ ಆಳವಡಿಸಿ ನಾಗರಹೊಳೆ ಕಾಡಿಗೆ ಬಿಡಲಾಗಿದೆ. ಈ ಆನೆ ನಾಗರ ಹೊಳೆಯಿಂದ ಎಲ್ಲಿಗೆ ಹೋಗುತ್ತದೆ, ಮತ್ತೆ ಈ ಪ್ರದೇಶಕ್ಕೆ ಏನಾದ್ರು ಮತ್ತೆ ಬರುತ್ತಾ ಅಂತ ಚಲನ ವಲನಗಳನ್ನು ಕಂಡು ಹಿಡಿಯಲು ರೆಡಿಯೋ ಕಾಲರ್ ಅಳವಡಿಸಿಲಾಗಿದೆ.
ಅಲ್ಲದೆ ಈ ಭಾಗದಲ್ಲಿ ಪುಡಾಂಟ ಮಾಡುತ್ತ ಮನುಷ್ಯರ ಮೇಲೆ ದಾಳಿಮಾಡುವ ಆನೆಗಳನ್ನು ಗುರುತು ಮಾಡಿ ಎರಡು ಕಾಡಾನೆಗಳಿಗೆ ರೆಡಿಯೋ ಕಾಲರ್ ಆಳವಡಿಸಿ ಆನೆಗಳ ಮೇಲೆ ನಿಗವಹಿಸಲಾಗಿದೆ.
ಆನೆ ಮಾನವ ಸಂಘರ್ಷವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ರೇಡಿಯೋ ಕಾಲರ್ ಅಳವಡಿಸುವ ಕಾರ್ಯ ಬಿರುಸಿನಿಂದ ಸಾಗಿದೆ. ಕಾಡಾನೆಗಳು ಎಲ್ಲಿ ಹೋಗುತ್ತವೆ, ಯಾವ ಕಾಫಿತೋಟದಲ್ಲಿ ಬೀಡು ಬಿಟ್ಟಿವೆ, ರಸ್ತೆಯಲ್ಲಿ ಯಾವಗ ಸಂಚಾರ ಮಾಡುತ್ತವೆ ಎಂಬು ಪತ್ತೆಹಚ್ಚಿ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ವಾಟ್ಸಪ್ ಗ್ರೂಪ್ ಮೂಲಕ ಮಾಹಿತಿ ನೀಡಲಾಗಿತ್ತದೆ. ಇನ್ನೂ ಕಾಡಾನೆಗಳ ಗುಂಪು ಇದ್ದು ಚಲನ ವಲನಗಳ ನಿಗ ವಹಿಸಲಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com