ಮಂಗಳೂರು: ಕೆಜಿಎಪ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದರು.ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಯಿತು.
ಈ ಹಿಂದೆ ತನ್ನ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತಂತೆ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು.ಶ್ರೀ ನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡರು.
ತನ್ನ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿದ್ದು ಅದರಂತೆ ಇದೀಗ ಹರಕೆಯನ್ನು ಶ್ರೀನಿಧಿ ಶೆಟ್ಟಿ ಸಲ್ಲಿಸಿದ್ದಾರೆ.ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀಯ ಎಂದು ದೈವಗಳು ಇದೇ ಸಂದರ್ಭ ಶ್ರೀ ನಿಧಿಶೆಟ್ಟಿಗೆ ಅಭಯ ನೀಡಿದೆ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com