ಕ್ರೈಂ ಸ್ಟೋರಿಸುದ್ದಿ
ಬೆಂಗಳೂರಲ್ಲಿ KAS ಅಧಿಕಾರಿ ಪತ್ನಿ ಆತ್ಮಹತ್ಯೆಗೆ ಟ್ವಿಸ್ಟ್ : 3 ತಿಂಗಳ ಹಿಂದೆಯೇ ಬರೆದಿಟ್ಟಿದ್ದ ‘ಡೆತ್ ನೋಟ್’

ಬೆಂಗಳೂರು : ಮನೆಯ ಬೆಡ್ ರೂಂ ಅಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಕಳೆದ ಮೂರು ತಿಂಗಳ ಹಿಂದೆಯೇ ಮೃತ ಚೈತ್ರ ಗೌಡ ಡೆತ್ ನೋಟ್ ಬರೆದಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ.
ನೆನ್ನೆ ಬೆಳಿಗ್ಗೆ ಸಂಜಯ್ ನಗರದಲ್ಲಿ ಮನೆ ಒಂದರಲ್ಲಿ ಕೆಎಎಸ್ ಅಧಿಕಾರಿ ಪತ್ನಿ ಹಾಗೂ ವೃತ್ತಿಯಲ್ಲಿ ವಕೀಲೆಯಾಗಿರುವಂತಹ ರೈತರ ಗೌಡ ಅವರು ಮನೆಯ ಬೆಡ್ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಅವರ ಶವವನ್ನು ರವಾನಿಸಲಾಗಿತ್ತು ಇದೀಗ ಪೊಲೀಸರು ಅವರ ಮನೆಯನ್ನು ಪರಿಶೀಲ ನಡೆಸಿದಾಗ ಈ ಒಂದು ಡೆತ್ ನೋಟ್ ಪ್ರತಿ ಪತ್ತೆಯಾಗಿದೆ.





