Wednesday, April 30, 2025
34.5 C
Bengaluru
LIVE
ಮನೆರಾಜ್ಯ20 ದಿನಗಳಾದರೂ ಕುಡಿಯಲು ನೀರು ಬಿಡದ ಗ್ರಾಮ ಪಂಚಾಯಿತಿ

20 ದಿನಗಳಾದರೂ ಕುಡಿಯಲು ನೀರು ಬಿಡದ ಗ್ರಾಮ ಪಂಚಾಯಿತಿ

ತುಮಕೂರು : ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬುಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟಲಹಳ್ಳಿ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಪ್ರತಿನಿತ್ಯ ಬಳಕೆಗೆ ಕೆರೆ ನೀರಿಗೆ ಮೊರೆ ಹೋದ ಗ್ರಾಮದ ಜನರು.

ಬೊರ್ ವೆಲ್ ನಲ್ಲಿ ನೀರು ಇದ್ದರೂ ಸಹ ಕುಡಿಯಲು ನೀರು ಸರಬರಾಜು ಮಾಡದೆ ಖಾಸಗಿ ಪ್ರಬಾವಿ ವ್ಯಕ್ತಿಯ ತೋಟಕ್ಕೆ ನೀರು ಸರಬರಾಜು ಆಗುತ್ತಿದೆ. ಇದಕ್ಕೆ ಗಮನ ಆರಿಸದ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಮಾಡಿದ್ದರೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ನೀರಿನ ವಿಚರವಾಗಿ ಯಾವುದೇ ಲೋಪದೋಷವಾಗದಂತೆ ಆದೇಶಕ್ಕೆ ಬೆಲೆ ಇಲ್ಲದೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೆರೆಯ ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಕೆರೆಯ ನೀರು ಶುದ್ಧವಿಲ್ಲದ ನೀರಾಗಿದ್ದರು ಪರ್ಯಾಯ ವ್ಯವಸ್ಥೆ ಇಲ್ಲದೆ ಕಾರಣ ದಿನ ನಿತ್ಯವೂ ಈ ನಿರನ್ನು ಬಳಸುವುದು ಅನಿವಾರ್ಯವಾಗಿದೆ. ಸ್ಥಳೀಯ ವಾಟರ್ ಮ್ಯಾನ್ ವಿಚಾರಿಸಿದರೆ ನಾವು ಬಿಟ್ಟಾಗ ನೀವು ನೀರನ್ನು ಕುಡಿಯಬೇಕು ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಮಾಡಿದ್ದರೆ.

ಖಾಸಗಿ ವ್ಯಕ್ತಿಯೊಬ್ಬರು ಟ್ಯಾಂಕರ್ ಮೂಲಕ ಮೂರು ದಿನಗಳಿಗೋಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ನಮ್ಮ ಗ್ರಾಮ ಪಂಚಾಯತ್ ಸದಸ್ಯರು ಕೂಡ ಈ ನೀರು ಹಿಡಿಯಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ದಿನ ನಿತ್ಯದ ಬಳಕೆಯ ನೀರಿಗಾಗಿ ಪ್ರತಿ ದಿನವೂ ಸುಮಾರು ಒಂದು ಕಿಲೋಮೀಟರ್ ನೆಡೆದುಕೊಂಡು ಹೋಗಿ ಕೆರೆಗೆ ಹೋಗಿ ಹೊತ್ತು ತಂದು ಬಳಸುತ್ತಿದ್ದೇವೆ. ಕೆರೆಯಲ್ಲಿ ಹೆಚ್ಚು ಗುಂಡಿಗಳಿದ್ದು ನೀರಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ ನಮ್ಮ ಪ್ರಾಣಕ್ಕೆ ಅಪಾಯವಾಗುವುದು ಆದರೂ ಸಹ ಜೀವನವನ್ನು ಸಾಗಿಸಲು ವಿಧಿಯಿಲ್ಲದೆ ಕಷ್ಟ ಪಡಬೇಕು ಎಂದು ಗ್ರಾಮಸ್ಧರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎರಡು-ಮೂರು ದಿನಗಳಿಗೊಮ್ಮೆ ಭೇಟಿ ನೀಡಿದಾಗ ಮಾತ್ರ ವಾಟರ್ ಮ್ಯಾನ್ ನೀರು ಬಿಡುತ್ತಾರೆ. ಸ್ಥಳದಿಂದ ಅವರು ಹೋದಾಗ ನೀರು ನಿಲ್ಲುಸುತ್ತಾರೆ ನಾಮಕವಸ್ಥೆಗೆ ಮಾತ್ರ ನೀರು ಬಿಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವಂತೆ ಗ್ರಾಮದ ಹೆಣ್ಣು ಮಕ್ಕಳು ಮನವಿ ಮಾಡಿಕೊಂಡರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments