ರಾಜ್ಯಸುದ್ದಿ

ಜೋರಾದ ಮಳೆ ಗಾಳಿಗೆ ನೆಲಕಚ್ಚಿದ ದ್ರಾಕ್ಷಿ ತೋಟ

ವಿಜಯಪುರ : ನಿನ್ನೆ ರಾತ್ರಿ ಜಿಲ್ಲೆಯ ಕೆಲವೆಡೆ ಜೋರಾದ ಮಳೆಗಾಳಿಗೆ ಮರ ಹಾಗೂ ವಿದ್ಯುತ್​ ಕಂಬಗಳು ಮುರಿದು ಬಿದ್ದಿರುವಂತಹ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಘಟನೆ ನಡೆದಿದೆ.

ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ಅವರ ದ್ರಾಕ್ಷಿ ತೋಟಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು ಮರ ಬಿದ್ದ ಪರಿಣಾಮ‌ ದ್ರಾಕ್ಷಿ ಸಾಲುಗಳು ಹಾಳಾಗಿವೆ. ಗಾಳಿ ಸಹಿತ ಮಳೆಯಿಂದಲೇ ದ್ರಾಕ್ಷಿ ಬೆಳೆ ನೆಲಕಚ್ಚಿದೆ.

ದ್ರಾಕ್ಷಿ ಬೆಳೆಗಾರ ವಿಶ್ವನಾಥ ಪಾಟೀಲ್​ಗೆ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಾಗಿದ್ದು, ತೋಟಗಾರಿಕಾ ಇಲಾಖೆಯಿಂದ ಸೂಕ್ತ ಪರಿಹಾರಕ್ಕೆ ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button