ವಿಜಯಪುರ : ಬಸ್ ನಿಲ್ದಾಣದಲ್ಲಿ ಉಗುಳಬೇಡ ಎಂದು ಬುದ್ದಿ ಹೇಳಿದಕ್ಕೆ ಬಸ್ ಕಂಡಕ್ಟರ್ ಮೇಲೆ ವ್ಯಾಪಾರಿಯಿಂದ ಹಲ್ಲೆಯಾಗಿರುವಂತಹ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರು – ಘತ್ತರಗಿ ಬಸ್ ಕಂಡಕ್ಟರ್ ವಸಂತ ಚವ್ಹಾಣ ಎನ್ನುವವರ ಮೇಲೆ ಬಸ್ ನಿಲ್ದಾಣದಲ್ಲಿ ಕಲ್ಲಂಗಡಿ ಮಾರಾಟ ಮಾಡುವ ವ್ಯಾಪಾರಿಯಿಂದ ಹಲ್ಲೆಯಾಗಿದೆ. ಅಫ್ರೀನ್ ಶೌಕತ್ ಮನಗೂಳಿ ಎಂಬ ಕಲ್ಲಂಗಡಿ ವ್ಯಾಪಾರಿಯಿಂದ ಹಲ್ಲೆ ಆರೋಪ ಕಂಡುಬಂದಿದೆ.
ಕಂಡಕ್ಟರನ್ನು ಬಸ್ ನಿಂದ ಕೆಳಗೆಳೆದು ತಂದು ವ್ಯಾಪಾರಿ ಹಲ್ಲೆ ಮಾಡಿದ್ದಾನೆ. ಸಾರ್ವಜನಿಕರು ಹಲ್ಲೆಯ ದೃಶ್ಯ ಸೆರೆ ಹಿಡಿದಿದ್ದಾರೆ. ಹಲ್ಲೆ ವೇಳೆ ಕಂಡಕ್ಟರ್ ವಸಂತ ಕ್ಯಾಶ್ ಬ್ಯಾಗ್ನಲ್ಲಿದ್ದ 33 ಸಾವಿರ ಮಿಸ್ ಆಗಿರುವುದು ಹಾಗೂ ಹಲ್ಲೆ ಕುರಿತು ಕಂಡಕ್ಟರ್ ವಸಂತ ಅವರಿಂದ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.