ವಿಜಯಪುರ : ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಬಾಳೆ ತೋಟ ನಾಶವಾಗಿರೋ ಘಟನೆ ನಡೆದಿದೆ. ಮುರುಗಪ್ಪ ಚೌಗುಲಾ ಎಂಬುವರಿಗೆ ಸೇರಿದ ತೋಟದಲ್ಲಿ ಶನಿವಾರ ಸಂಜೆ ಬಿರುಗಾಳಿಗೆ ಬಾಳೆ ತೋಟ ಸಂಪೂರ್ಣ ಹಾಳಾಗಿದೆ.
ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ಬಾಳೆ ಗಿಡಗಳನ್ನು ಬೆಳೆಯಲಾಗಿತ್ತು. ಕಟಾವು ಹಂತಕ್ಕೆ ಬಂದಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಗಳಿದ್ದೂ, ಬೆಳೆಗಾರನಿಗೆ ಸುಮಾರು ರೂ. 2 ಲಕ್ಷ ಹಾನಿ ಉಂಟಾಗಿದೆ.
ಅಷ್ಟೇ ಅಲ್ಲದೇ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದೂ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತ ಕಂಗಾಲಾಗಿದ್ದಾನೆ. ಕೈ ತಪ್ಪಿದ ಇಳುವರಿಗಾಗಿ ರೈತನ ದುಖಃ ಮುಗಿಲು ಮುಟ್ಟಿದೆ.