ವಿಜಯನಗರ : ಆಕಸ್ಮಿಕ ಬೆಂಕಿ ತಗಲಿ ಹತ್ತಾರು ಬಣವೆಗಳು ಸುಟ್ಟು ಕರಕಲಾದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಜರುಗಿದೆ.
ರೈತರ ಮೇವಿನ ಬಣವೆಗಳಿಗೆ ಬೆಂಕಿ ಹತ್ತಿದ್ದು ಕೆಲವೇ ಸಮಯದಲ್ಲಿ ಬೆಂಕಿ ಆವರಸಿದೆ. ಒಂದು ಬಣವೆಯಿಂದ ಮತ್ತೊಂದು ಬಣವೆಗೆ ಬೆಂಕಿ ಚಾಚಿದೆ. ಭತ್ತದ ಹುಲ್ಲು, ಶೇಂಗಾ ಹೊಟ್ಟು, ತೊಗರಿ ಹೊಟ್ಟು, ಜೋಳದ ಮೇವು, ಬಣವೆಗಳಿಗೆ ಬೆಂಕಿ ಬಿದ್ದಿದು. ಲಕ್ಷಾಂತರ ರೂಪಾಯಿ ಮೌಲ್ಯದ ಮೇವಿನ ಬಣವೆಗಳು ಸುಟ್ಟು ಕರಕಲಾಗಿದೆ. ದನಕರಿಗಳಿಗೆ ರೈತರು ಸಂಗ್ರಹಿಸಿದ್ದ ಮೇವು ಬೆಂಕಿಗೆ ಆಹುತಿ ಆಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಳ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ.


