ವಿಜಯನಗರ : ಭದ್ರ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಹರಿದಿದ್ದು, ಫ್ರೀಡಂ ಟಿವಿ ವರದಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಟಿ.ಬಿ ಡ್ಯಾಂ ಖಾಲಿ ಖಾಲಿ ಎಂಬ ಶೀರ್ಷಿಕೆಯಡಿ ವರದಿಯಾಗಿತ್ತು ಆದರೆ ಈಗ ಆ ಸಮಸ್ಯೆ ಬಗೆಹರಿದಿದೆ.
ನೆನ್ನೆ ಭದ್ರ ಜಲಾಶಯದಿಂದ ಎರಡು ಟಿ.ಎಂ.ಸಿ ನೀರು ಟಿ. ಬಿ ಡ್ಯಾಂ ಜಲಾಶಯಕ್ಕೆ ಹರಿದ ದೃಶ್ಯ ಸೆರೆಯಾಗಿದ್ದು, ಸತತ ವರದಿ ಪ್ರಸಾರದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಹಾಗು ಸರ್ಕಾರ, ಕೂಡ್ಲಿಗಿ ಶಾಸಕರ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಫ್ರೀಡಂ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಜನಸಾಮಾನ್ಯರ ಧ್ವನಿಯಾಗಿ ಫ್ರೀಡಂ ಟಿ.ವಿ ವರದಿಯನ್ನ ಬಿತ್ತರಿಸಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ,ಕೂಡ್ಲಿಗಿ, ಹಡಗಲಿ, ಹೊಸಪೇಟೆ ಭಾಗಕ್ಕೂ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಭಧ್ರ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿದ್ದಂತೆ ವಿಜಯನಗರ ಜಿಲ್ಲೆಯ ಜನತೆ ಮೊಗದಲ್ಲಿ ಹರ್ಷ ತುಂಬಿ ತುಳುಕಾಡುತ್ತಿದೆ.