ಪಾಟ್ನಾ : ನವರಾತ್ರಿ ವೇಳೆ ಮೀನು ಸೇವನೆ ಮಾಡಿದ್ದಕ್ಕಾಗಿ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಪ್ರಸಾದ್ ಟೀಕೆಗೆ ಗುರಿಯಾಗಿದ್ದಾರೆ. ಜಾಲತಾಣಗಳಲ್ಲಿಯೂ ಟ್ರೋಲ್ಗಳಾಗಿವೆ. ಚೈತ್ರ ನವರಾತ್ರಿಯ ಮೊದಲ ದಿನವಾದ ಏಪ್ರಿಲ್.9 ರಂದು ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದ ತೇಜಸ್ವಿ ಮೀನು ತಿಂದಿದ್ದಾರೆ.
ಆ ವಿಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡು ಚುನಾವಣೆ ಪ್ರಚಾರವಿರುವ ಹಿನ್ನೆಲೆಯಲ್ಲಿ ತಾವು ಹೆಲಿಕಾಪ್ಟರ್ನಲ್ಲೇ ಆಹಾರ ಸೇವನೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಉದನ್ನು ಖಂಡಿಸಿ ಶ್ರಾವಣದಲ್ಲಿ ಮಟನ್ ಸೇವನೆ ನವರಾತ್ರಿಯಲ್ಲಿ ಮೀನು ಸೇವನೆ ಮಾಡುವುದು ಸನಾತನ ಧರ್ಮದ ಪದ್ಧತಿಗೆ ಅಗೌರವ ತೇಜಸ್ವಿ ಸೀಸನಬಲ್ ಸನಾತನಿ! ಎಂದು ಟೀಕಿಸಿದ್ದಾರೆ.


