ಪಟಿಯಾಲ(ಪಂಜಾಬ್): ಮಗಳ ಹುಟ್ಟುಹಬ್ಬಕ್ಕೆ ತಂದೆ – ತಾಯಿ ಆನ್‌ಲೈನ್ ಮೂಲಕ ತರಿಸಿದ್ದ ಕೇಕ್ ತಿಂದ ಹಲವರು ಅಸ್ವಸ್ಥರಾಗಿದ್ದು, ಜನ್ಮದಿನ ಆಚರಿಸಿಕೊಂಡಿದ್ದ ಹತ್ತು ವರ್ಷದ ಬಾಲಕಿ ಸಾವನ್ನಪ್ಪಿರುವಂತ ಘಟನೆ ಪಂಜಾಬ್‌ನ ಪಟಿಯಾಲಾದಲ್ಲಿ ನಡೆದಿದೆ.
10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರು ಮಾನ್ವಿಯ ಹುಟ್ಟಹಬ್ಬಕ್ಕೆ ಹಾಜರಾಗಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿದೆ. ಬಾಲಕಿ ಮಾನ್ವಿ ಕೂಡ ಕತ್ತರಿಸಿದ ಕೇಕ್ ತಿಂದಿದ್ದಾಳೆ. ಇತ್ತ ಕುಟುಂಬಸ್ಥರು, ಆಪ್ತರು ಬರ್ತಡೇ ಗರ್ಲ್‌ಗೆ ಕೇಕ್ ತಿನ್ನಿಸಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ದಾರೆ.
ಆದರೆ ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದಾರೆ. ತುಸು ಹೆಚ್ಚು ಕೇಕ್ ತಿಂದಿದ್ದ ಬಾಲಕಿ ಮಾನ್ವಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಮಾರ್ಚ್ 24ರಂದೇ ಮಾನ್ವಿಯ ಹುಟ್ಟುಹಬ್ಬ ಆಚರಣೆಯಾಗಿದ್ದು, ಅಂದು ಅಸ್ವಸ್ಥಳಾಗಿದ್ದ ಮಾನ್ವಿ ಮೃತಪಟ್ಟಿದ್ದಾಳೆ.