Friday, January 30, 2026
16.1 C
Bengaluru
Google search engine
LIVE
ಮನೆಸಿನಿಮಾಬಿಗ್​ ಬಾಸ್​ ವಿನ್ನರ್​ ಅರೆಸ್ಟ್​!

ಬಿಗ್​ ಬಾಸ್​ ವಿನ್ನರ್​ ಅರೆಸ್ಟ್​!

ಮುಂಬೈ : ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್​​ ಫರೂಕಿ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ , ಮುಂಬೈ ಪೊಲೀಸ್‌ ಸಮಾಜ ಸೇವಾ ಶಾಖೆಯು ʻಬೋರಾ ಬಜಾರ್‌ʼನಲ್ಲಿರುವ  ʻಸಬಲನ್ ಹುಕ್ಕಾ ಬಾರ್ʼ ಮೇಲೆ ದಾಳಿ ನಡೆಸಿತ್ತು. ʻತಂಬಾಕು ಆಧಾರಿತ ಹುಕ್ಕಾ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗಿತ್ತು. ಈ ಮಾಹಿತಿಯ ಮೇರೆಗೆ ನಮ್ಮ ತಂಡವು ದಾಳಿ ಮಾಡಿದೆ. ದಾಳಿ ವೇಳೆ 4,400 ರೂ. ನಗದು ಹಾಗೂ 13,500 ಮೌಲ್ಯದ ಒಂಬತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲ ʻʻದಾಳಿಯ ಸಮಯದಲ್ಲಿ, ಸ್ಟ್ಯಾಂಡ್-ಅಪ್ ಕಮೆಡಿಯನ್ ಮುನಾವರ್ ಮತ್ತು ಇತರರು ಹುಕ್ಕಾಗಳನ್ನು ಸೇದುತ್ತಿದ್ದರು. ಆ ವಿಡಿಯೊ ಕೂಡ ನಮ್ಮಲ್ಲಿ ಇದೆ. ಫಾರೂಕಿ ಮತ್ತು ಇತರರನ್ನು ಮೊದಲು ಬಂಧಿಸಿದ್ದೇವು.

ಆ ಬಳಿಕ ಕಾನೂನು ಪ್ರಕಾರ ರಿಲೀಸ್‌ ಮಾಡಲು ಅನುಮತಿಸಲಾಗಿದೆʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹಿಂದಿಯ ಬಿಗ್ ಬಾಸ್ 17ನೇ  ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಕಿ  ಅವರು ಹೊರ ಹೊಮ್ಮಿದ್ದರು. ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು.

ಈ ಬಗ್ಗೆ ಮುನಾವರ್‌ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼ ಎಂದಿದ್ದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments