Tuesday, June 24, 2025
25.9 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಕಾಸರಗೋಡಿನಲ್ಲಿ ಲವ್ ಜಿಹಾದ್ ಆರೋಪ- ಹಿಂದೂ ಶಿಕ್ಷಕಿಯ ಮದ್ವೆಯಾದ ಮುಸ್ಲಿಂ ಯುವಕ!

ಕಾಸರಗೋಡಿನಲ್ಲಿ ಲವ್ ಜಿಹಾದ್ ಆರೋಪ- ಹಿಂದೂ ಶಿಕ್ಷಕಿಯ ಮದ್ವೆಯಾದ ಮುಸ್ಲಿಂ ಯುವಕ!

ಮಂಗಳೂರು: ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಕೇಳಿ ಬಂದಿದೆ. ಕಾಸರಗೋಡಿನ ಬದಿಯಡ್ಕ ನಿವಾಸಿ ಹಿಂದೂ ಯುವತಿ ನಾಪತ್ತೆಯಾಗಿದ್ದು, ಇದೀಗ ಅನ್ಯಕೋಮಿನ ಯುವಕನ ಜೊತೆ ಮದುವೆಯಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.

ಕಾಸರಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ನೇಹಾ ಮೇ 23 ರಂದು ಮನೆಯಿಂದ ತೆರಳಿದ್ದು ಬಳಿಕ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಅಲ್ಲದೇ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಬದಿಯಡ್ಕದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವತಿ ನೇಹಾ ಹಾಗೂ ಯುವಕ ಮಿರ್ಶಾದ್ ಭಾವಚಿತ್ರ ಸಹಿತ ನೋಟೀಸ್ ಅಲ್ಲಿನ ಬೊರ್ಡ್ ನಲ್ಲಿ ಪತ್ತೆಯಾಗಿತ್ತು. ಇದೀಗ ಇಬ್ಬರೂ ಬದಿಯಡ್ಕ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಯುವತಿ ಸ್ವ-ಇಚ್ಛೆಯಿಂದ ಯುವಕನ ಜೊತೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ.

ಈಕೆಯನ್ನ ಲವ್ ಜಿಹಾದ್ ಗೆ ಬಲಿಯಾಗಿಸಲಾಗಿದೆ ಎಂದು ಮನೆಯವರು ಹಾಗೂ ವಿಎಚ್ ಪಿ ಆರೋಪಿಸಿದೆ. ಸ್ಥಳೀಯ ಮುಸ್ಲಿಂ ಲೀಗ್ ನಾಯಕ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾನೆ, ಹಿಂದೂ ಯುವತಿಯನ್ನ ಮುಸ್ಲಿಂ ಧರ್ಮಕ್ಕೆ ಮತಾಂತರಿಸಲು ಭಾರೀ ಸಂಚು ನಡೆಸಿದ್ದಾರೆಂದು ವಿಎಚ್ ಪಿ ಮುಖಂಡರು ಆರೋಪಿಸಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments