ಕಲಬುರಗಿ : ಕಲಬುರಗಿಯ MRMC ಮೆಡಿಕಲ್ ಕಾಲೇಜು ಪಿಜಿ ವಿದ್ಯಾರ್ಥಿಗಳ ಶಿಷ್ಯವೇತನ ವಂಚನೆ ಪ್ರಕರಣ ಕಂಡುಬಂದಿದ್ದು, ಎಚ್ ಕೆ ಇ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಲೇಜು ಪ್ರಿನ್ಸಿಪಾಲ್ ಡಾ.ಎಸ್.ಎಂ.ಪಾಟೀಲ್, ಅಕೌಂಟೆಂಟ್ ಸುಭಾಷ್ ಜಗನ್ನಾಥ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮೆಡಿಕಲ್ ಕಾಲೇಜು ಪಿಜಿ ವಿದ್ಯಾರ್ಥಿಗಳ ಶಿಷ್ಯವೇತನದ 81 ಕೋಟಿ ವಂಚನೆ ಆರೋಪ ಹಿನ್ನೆಲೆ ನ್ಯಾಯವಾದಿ ವಿನೋದ್ ಕುಮಾರ್ ಜೆನವೇರಿ ನೀಡಿದ ದೂರಿನ ಅನ್ವಯ ಕಲಬುರಗಿ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳು ಶಿಷ್ಯವೇತನ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. 2008ರಿಂದ 2024 ಮಾರ್ಚ್ ವರೆಗೆ 282 ಜನ ಪಿಜಿ ವಿದ್ಯಾರ್ಥಿಗಳ 81 ಕೋಟಿ 21 ಲಕ್ಷ ರೂಗಳ ವಂಚನೆ ಆರೋಪ ಪೊಲೀಸ್ ಕಮಿಷನರ್ ಕಚೇರಿಗೆ ವಿದ್ಯಾರ್ಥಿಗಳು ತೆರಳಿ ದೂರನ್ನು ನೀಡಿದ್ದಾರೆ.