ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಸವರಾಜ ಬೋಮ್ಮಾಯಿ ಅವರೊಂದಿಗೆ ಶಾಸಕ ಡಾ.ಚಂದ್ರು, ಕೆ.ಲಮಾಣಿಯವರು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದ ಆರಾಧ್ಯ ದೈವರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಈ ವೇಳೆ ಸಿ.ಸಿ. ಪಾಟೀಲ, ಮುಂಡರಗಿ ಮಂಡಲದ ಅಧ್ಯಕ್ಷರು, ಗ್ರಾಮದ ಗುರು ಹಿರಿಯರು ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪ್ರಮುಖರ, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ತಾಯಿಂದಿರು, ಯುವಕ ಮಿತ್ರರು, ಪಕ್ಷದ ಅಭಿಮಾನಿಗಳು ಮಾಜಿ ಸಿಎಂ ಗೆ ಸಾಥ್ ನೀಡಿದರು.