ಕಾನ್ಪುರ(ಉತ್ತರ ಪ್ರದೇಶ): ಬಿಲ್ಲಾಪುರ ಪ್ರದೇಶದಲ್ಲಿ 80 ವರ್ಷದ ಅಜ್ಜಿಯ ಮೇಲೆ ಆಕೆಯ ಸಂಬಂಧಿಕ ಯುವಕನೇ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಆರೋಪಿ 22 ವರ್ಷದ ಅಮಿತ್ ಗೌತಮ್‌ನನ್ನು ಪೋಲೀಸರು ಬಂಧಿಸಿದ್ದಾರೆ. ಶುಕ್ರವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಜೈಲಿಗೆ ಕಳುಹಿಸಲಾಗಿದೆ. ಪೋಲೀಸ್ ಮೂಲಗಳ ಪ್ರಕಾರ, ಕಳೆದ ಗುರುವಾರ ರಾತ್ರಿ ಅಜ್ಜಿಯು ತನ್ನ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಮನೆಗೆ ನುಗ್ಗಿದ ಯುವಕ ಅತ್ಯಾಚಾರ ಎಸಗಿದ್ದಾನೆ ಎಂಬುದು ತಿಳಿದು ಬಂದಿದೆ.
ಆತ ಅಜ್ಜಿಗೆ ಹೊಡೆದಿದ್ದು ಅಜ್ಜಿಯ ಹಲ್ಲು ಮುರಿದಿದೆ. ಅಜ್ಜಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿಯು ಗೋಡೆ ಹಾರಿ ಓಡಿ ಹೋಗಿದ್ದಾನೆ. ತನಿಖೆಯಲ್ಲಿ ಅಜ್ಜಿಯು ಯುವಕನಿಗೆ ಸಂಬಂಧದಲ್ಲೂ ಅಜ್ಜಿಯೇ ಆಗಬೇಕಿದ್ದು ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಯುವಕನು ಕೂಲಿ ಕೆಲಸ ಮಾಡುತ್ತಿದ್ದು, ಅತ್ಯಾಚಾರಕ್ಕೂ ಮುನ್ನ ಗೆಳೆಯರ ಜತೆ ಅತಿಯಾಗಿ ಕುಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.