ಕಲ್ಕಿ 2898 ಎಡಿ ರಿಲೀಸ್ ಡೇಟ್: ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಕಲ್ಕಿ ಸಿನಿಮಾದ ಹೊಸ ಅಪ್‌ಡೇಟ್ ಹೊರ ಬಂದಿದೆ. ಅಂತೂ ಇಂತೂ ಕಲ್ಕಿ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ಇದೇ ಜೂನ್ 20ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಚುನಾವಣೆಯ ನಂತರ ಈ ಚಿತ್ರ ಬಿಡುಗಡೆಯಾಗಲಿದೆ.
ಮುಂಬರುವ ಲೋಕಸಭಾ ಚುನಾವಣೆಯ ಕಾರಣದಿಂದ ಈ ಸಿನಿಮಾದ ತೆರೆಕಾಣಲಿದೆ. ಆದರೆ ಚಿತ್ರತಂಡ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿಲ್ಲ. ಮೊದಲು ಪ್ರಭಾಸ್ ನಟನೆಯ ಕಲ್ಕಿ 2898 AD ಅನ್ನು ಮೇ 30, 2024 ರಿಲೀಸ್ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಈ ಸಿನಿಮಾದ ದಿನಾಂಕವನ್ನು ಮುಂದೂಡಲಾಗಿದೆ.
ಕಲ್ಕಿ 2898 AD ಚಿತ್ರವನ್ನು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲೂ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇದು ಭಾರತದ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ಅಂತಹ ಅನೇಕ ಕಲಾವಿದರು ನಟಿಸಿದ್ದಾರೆ.
ನಟ ಪ್ರಭಾಸ್ ಕಲ್ಕಿ 2898 AD ಜೊತೆಗೆ, ಡೈರೆಕ್ಟರ್ ಮಾರುತಿ ಹಾಸ್ಯ-ಭಯಾನಕ ಚಿತ್ರ ದಿ ರಾಜಾ ಸಾಬ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು VFX ನ ವ್ಯಾಪಕ ಬಳಕೆಯನ್ನು ಹೊಂದಿದೆ ಎನ್ನಾಲಾಗುತ್ತಿದೆ. ಇನ್ನೂ ಈ ನಟ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾದಲ್ಲಿ ಪ್ರಾಮಾಣಿಕ ಮತ್ತು ಕೋಪಗೊಂಡ ಯುವ ಪೋಲೀಸ್ ಪಾತ್ರದಲ್ಲಿ ಕೂಡ ನಟಿಸಲಿದ್ದಾರೆ.