ಬೆಂಗಳೂರು: ನಟ ಮೋಹನ್ ಬಾಬು ಮಗ ವಿಷ್ಣು ಮಂಚು ಅವರು `ಕಣ್ಣಪ್ಪ’  ಸಿನಿಮಾದಲ್ಲಿ ನಿರತರಾಗಿದು. ಈ ಚಿತ್ರವನ್ನು ನಟ, ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಮುಕೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ತಂಡಕ್ಕೆ ಅಕ್ಷಯ್​ ಕುಮಾರ್ ಸೇರ್ಪಡೆಯಾಗುತ್ತಿದ್ದಾರ

ಅಕ್ಷಯ್‌ ಕುಮಾರ್‌ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್‌ ಕುಮಾರ್‌ ಅವರು ಪ್ರತಿಷ್ಠಿತ ಪ್ಯಾನ್-ಇಂಡಿಯಾ ನಟ ವಿಷ್ಣು ಮಂಚು ಅವರ  ʻಕಣ್ಣಪ್ಪʼ ಸಿನಿಮಾ ತಂಡಕ್ಕೆ ಸೇರಿದ್ದಾರೆ. ಪ್ರಭಾಸ್ ನಂತರ, ಮೋಹನ್‌ಲಾಲ್, ತಾರಾಗಣಕ್ಕೆ ಸೇರ್ಪಡೆಯಾಗಿದರೆ. ಇನ್ನಷ್ಟು ರೋಚಕ ಅಪ್‌ಡೇಟ್‌ಗಳಿಗಾಗಿ ಟ್ಯೂಟ್ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ 1993ರಲ್ಲಿ ʻಅಶಾಂತ್ʼ ಎಂಬ ದ್ವಿಭಾಷಾ ಚಲನಚಿತ್ರದಲ್ಲಿ ನಟಿಸಿದ್ದರು ಇದು ಕನ್ನಡದಲ್ಲಿ ʻವಿಷ್ಣು ವಿಜಯʼ ಎಂದು ಬಿಡುಗಡೆಯಾಯಿತು. ಇದು ಅಕ್ಷಯ್‌ ಅವರ ಮೊದಲ ದಕ್ಷಿಣ ಭಾರತದ ಚಿತ್ರ. ವರ್ಷಗಳ ನಂತರ, ಅವರು ಶಂಕರ್ ಅವರ ʻ2018ʼರ ರಜನಿಕಾಂತ್‌ ನಟನೆಯ ʻ2.0ʼ ಸಿನಿಮಾ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ಇದೀಗ ʻಕಣ್ಣಪ್ಪʼ ಅಕ್ಷಯ್‌ ಕುಮಾರ್‌ ಅವರ ಮೂರನೇ ದಕ್ಷಿಣ ಭಾರತದ ಸಿನಿಮಾವಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights