ರಾಜ್ಯಸುದ್ದಿ

ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; 16 ಲಕ್ಷ ರೂ.ವಶಕ್ಕೆ

ಚಿಕ್ಕೋಡಿ : ದೇಶಾದ್ಯಂತ ಲೋಕಸಭಾ ಚುನಾವಣೆ ರಂಗೇರಿದ್ದು, ಕೆಲವೆಡೆ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಬುಧವಾರ ತಡರಾತ್ರಿ ಚಿಕ್ಕೋಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16,31,050 ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರದ ಇಂಚಲ್ಕರಂಜಿ ನಗರದ ಇಬ್ಬರು ನಿವಾಸಿಗಳು ಚಿಕ್ಕೋಡಿ ಬಸ್ ನಿಲ್ದಾಣದಿಂದ ತಮ್ಮೂರಿಗೆ ಬಸ್ ಮೂಲಕ ದಾಖಲೆ ಇಲ್ಲದೆ, 16 ಲಕ್ಷ 31 ಸಾವಿರ ರೂ. ಹಣವನ್ನು ಸಾಗಿಸುತ್ತಿದ್ದರು. ತಪಾಸಣೆ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಹಣದ ಜೊತೆಗೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

 

 

 

Comments (0)

Your email address will not be published. Required fields are marked *

Back to top button