ಚಿಕ್ಕೋಡಿ : ಚಿಕ್ಕೋಡಿ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚಿಕ್ಕೋಡಿ ಮತಕ್ಷೇತ್ರದಲ್ಲಿ ಪುತ್ರಿ ಪರ ಸಚಿವ ಸತೀಶ ಅಬ್ಬರದ ಪ್ರಚಾರ ನಡೆಸಿದ್ದಾರೆ.  ಶಾಸಕ ಗಣೇಶ ಹುಕ್ಕೇರಿ, ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತಕ್ಷೇತ್ರದ ಎಕ್ಸಂಬಾ ಪಟ್ಟಣದ ಸಭಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಜರುಗಿತು.

ಸಮಾವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭಾಗಿಯಾಗಿದ್ದರು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್ ಶಾಸಕರಿಂದ ಕೈ ಅಭ್ಯರ್ಥಿ ವಿರೋಧ ಇಲ್ಲಾ. ಅವರವರ ಕ್ಷೇತ್ರ ಅವರದ್ದೆ ಜವಾಬ್ದಾರಿ ಇರುತ್ತದೆ ಎಂದರು.

ವಿರೋಧ ಪಕ್ಷದ ನಾಯಕರು ಆರೋಪ ಮಾಡ್ತಾರೆ ಅಷ್ಟೇ.‌ ನಮ್ಮ ಪಕ್ಷದ ಶಾಸಕರು ನಮ್ಮ ಪರವಾಗಿಯೆ ಕೆಲಸ ಮಾಡುತ್ತಾರೆ ಎಂದರು ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿ ಟ್ರಂಪ್ ಕಾರ್ಡ್ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ ರಾಜು ಕಾಗೆ, ಪ್ರಕಾಶ್ ಹುಕ್ಕೇರಿ ಲಕ್ಷ್ಮಣ ಸವದಿಯಂತ ಲಿಂಗಾಯತ ನಾಯಕರೆ ನಮ್ಮ ಪಾರ್ಟಿಯಲ್ಲಿದ್ದಾರೆ‌. ಜಾತಿ ಧರ್ಮದ ಆಧಾರದ ಮೇಲೆ ಚುನಾವಣೆ ಆಗಲ್ಲಾ ಪಕ್ಷ ಆಧಾರಿತ ಚುನಾವಣೆ ಆಗಲಿದೆ ಎಂದು ಹೇಳಿದರು.

ಎಲ್ಲಾ ಕಾಂಗ್ರೆಸ್ ಶಾಸಕರು ನಮ್ಮ ಪರವಾಗಿದ್ದಾರೆ ಜೂನ 4 ರಂದು ರಿಸಲ್ಟ್​ ಸಿಗಲಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವ ವಿಚಾರವಾಗಿ ಸರ್ಕಾರದ ತನ್ನ ಮಟ್ಟದ ಪ್ರಯತ್ನ ಮಾಡುತ್ತಿದೆ.ನೀರು ಬಿಡಿಸಲು ಸರ್ಕಾರದ ಸಿ.ಎಸ್. ಪ್ರಯತ್ನ ಮಾಡುತ್ತಿದ್ದಾರೆ‌. ಎರಡನೇ ಹಂತದಲ್ಲಿ ಎಲ್ಲ ನಾಯಕರೂ ಪ್ರಚಾರಕ್ಕೆ ಬರುತ್ತಾರೆ ಎಂದು ಸತೀಶ್ ಜಾರಕಿಹೋಳಿ ಹೇಳಿದರು‌.

By admin

Leave a Reply

Your email address will not be published. Required fields are marked *

Verified by MonsterInsights