ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಸುಧಾಕರ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ‘ಅವನ್ಯಾರು’ ಎಂದು ಏಕ ವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಪ್ರೆಸ್ ಮೀಟ್ ನಡೆಸಿ ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಪಾರ್ಲಿಮೆಂಟ್ ಹೋಗುವುದಕ್ಕೆ ಸುಧಾಕರ್ ಅವರನ್ನ ಬಿಡುವುದಿಲ್ಲ ಎಂದರು.
ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಲ್ಲಲಿ ಎಂದು ಸವಾಲು ಹಾಕಿದ್ದಾರೆ. ಮಾಜಿ ಸಚಿವ ಡಾ.ಕೆ.ಸುಧಾಕರ್ಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಿದ್ದಕ್ಕೆ ಪ್ರದೀಪ್ ಈಶ್ವರ್ ಗರಂ ಆಗಿದ್ದಾರೆ. ಪಾರ್ಲಿಮೆಂಟ್ ಶ್ರೇಷ್ಠವಾದ ಜಾಗ, ಪಾರ್ಲಿಮೆಂಟ್ ಹೋಗುವುದಕ್ಕೆ ಸುಧಾಕರ್ಗೆ ಬಿಡಲ್ಲ. ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಲ್ಲಲಿ. ಆದ್ರೆ, ಸಂಸತ್ ಪ್ರವೇಶಿಸಲು ಸುಧಾಕರ್ಗೆ ಬಿಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ‘ಕೈ’ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಸುಧಾಕರ್ ಟಾರ್ಚರ್ ನಿಂದಲೇ ನಾನು ಶಾಸಕನಾಗಿದ್ದೇನೆ. ಸುಧಾಕರ್ ಕಾಂಗ್ರೆಸ್ ಗೆ ಥ್ರೆಟ್ ಅಲ್ಲ. ಬಿಜೆಪಿಗೆ ಥ್ರೆಟ್. ಕೋವಿಡ್ ಹಗರಣದ ಎಲ್ಲ ತನಿಖೆ ಆಳವಾಗಿ ನಡೆಯುತ್ತಿದೆ. ಒಂದು ಮಾಸ್ಕ್ 450ರೂ.ಗೆ ಖರೀದಿ ಮಾಡಿ ಹಗರಣ ಮಾಡಿದ್ದಾರೆ. ಅವರದೇ ಶಾಸಕ ವಿಶ್ವನಾಥ್ ಸುಧಾಕರ್ ಪರ ಕೆಲಸ ಮಾಡಲ್ಲ ಅಂದಿದ್ದಾರೆ. ಐಟಿ ಇಡಿ ಬಿಟ್ಟು ಕಾಟ ಕೊಡ್ತೀರಾ ಸುಧಾಕರ್ ಅವರೇ ನಾನು ರೆಡಿ ಇದ್ದೀನಿ. ಡಾ.ಕೆ ಸುಧಾಕರ್ಗೆ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ. ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡ್ತಾರೆ. ಸುಧಾಕರ್ ನಾಳೆ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯಾವುದೇ ಹಗರಣ ಮಾಡಿಲ್ಲ ಅಂತ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.